ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಬಾರ್ಕೂರಿನ ಕೋಟೆಕೆರೆ ಸ್ವಚ್ಚತಾ ಶ್ರಮದಾನ ನಡೆಸಿದರು.

ಕೆರೆಯು ಹಲವಾರು ವರ್ಷಗಳಿಂದ, ಹೂಳು, ಪಾಚಿ ಮತ್ತು ಗಿಡಗಂಟಿಗಳಿಂದ ಕೆರೆ ಬಹುತೇಕ ಮುಚ್ಚಿ ಹೋಗಿತ್ತು.
ಗಣೇಶ ಚತೀರ್ಥಿಯಂದು ಗಣಪತಿ ಮೂರ್ತಿ ವಿಸರ್ಜನೆಗೆ ಸಾಗುವ ದಾರಿಯನ್ನು ಈ ಸಂದರ್ಭದಲ್ಲಿ ಸ್ವಚ್ಚತೆ ಮಾಡಲಾಯಿತು.

ಕೆರೆಯಲ್ಲಿ ಬೆಳೆದ ಪಾಚಿ ಮತ್ತು ಹುಲ್ಲು ತೆಗೆಯುವುದು ಬಹಳ ಸವಾಲಿನ ಕೆಲಸವಾಗಿತ್ತು. ದೋಣಿಯ ಮೂಲಕ ತೆರಳಿ, ಪಾಚಿ,ಹುಲ್ಲುಗಳನ್ನು ಸ್ವಚ್ಛ ಮಾಡಲಾಯಿತು. ಸಂಗ್ರಹಿಸಿದ ಕಸವನ್ನು ಊರಿನ ಹೊರಭಾಗದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸ್ವಯಂಸೇವಕರಾದ ಸುರೇಶ್ ನಾಯ್ಕ್ , ಅಶೋಕ್, ವಿಮಲ್, ಜ್ಯೋತಿ, ನಿರ್ಮಲ N, ನಿರ್ಮಲ K,ಗೌರಿ, ರೇಖಾ, ಶಾಲಿನಿ, ಮಂಜುನಾಥ್ ಶ್ರಮದಾನದಲ್ಲಿ ಭಾಗವಹಿಸಿದರು.