ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಲಂಕಾರು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಡ ಕುಟುಂಬದ ಮನೆ ರಚನೆಗೆ ಪೂರಕವಾಗಿ ಹಳೆಯ ಮನೆಯ ತೆರವು ಕೆಲಸ ಮಾಡಿದರು.

ಆಲಂಕಾರು ವಲಯದ ಶರವೂರು ಗ್ರಾಮದ ಎಲ್ಯಕ್ಕ ಎನ್ನುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮನೆ ಮಂಜೂರಾಗಿದ್ದು ಮನೆ ರಚನೆ ಮಾಡುವ ಉದ್ದೇಶದಿಂದ ಹಳೆಯ ಮನೆ ತೆರವು ಮಾಡುವ ಕೆಲಸವನ್ನು ಮಾಡಿದರು.
ಘಟಕದ ಸದಸ್ಯರಾದ ಹರೀಶ ಸವಿತಾ ಉಮೇಶ ಸಂತೋಷ ಕೇಶವ ಇವರು ಶ್ರಮದಾನದಲ್ಲಿ ಭಾಗವಹಿಸಿದರು.