ಬಂಟ್ವಾಳ: ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ, ವಾಮದಪದವು ಘಟಕದಿಂದ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ  ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಾಮದಪದವು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ತಾಲ್ಲೂಕಿನ ಕೊರಗಟ್ಟೆಯ ಕೆಮ್ಮರು -ತಾರಬರಿ ಹೋಗುವ ರಸ್ತೆ ಅಜ್ಜಿಬೆಟ್ಟು  ಎಂಬಲ್ಲಿನ ರಸ್ತೆ ಬದಿಯಲ್ಲಿ ಗಿಡಗಂಟಿಗಳು, ಬಳ್ಳಿಗಳು ಬೆಳೆದು ರಸ್ತೆಯ ತಿರುವಿನಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.

ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ ಮಾಡಬೇಕೆಂದು ನಿರ್ಧರಿಸಿದ ಸ್ವಯಂಸೇವಕರು ಕೊರಗಟ್ಟೆಯ ಕೆಮ್ಮರು- ತಾರಬರಿ ಹೋಗುವ ರಸ್ತೆ ಅಜ್ಜಿಬೆಟ್ಟು ವಿನ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಸ್ವಚ್ಚತಾ ಶ್ರಮದಾನ ನಡೆಸಿದರು.

ಘಟಕ ಪ್ರತಿನಿಧಿ ರವೀಂದ್ರ ರೈ, ಮಾದವ, ಪ್ರಕಾಶ್ ಪೂಜಾರಿ, ಸುರೇಶಶೆಟ್ಟಿ , ಚೇತನಕುಮಾರ, ತಾರಾನಾಥಶೆಟ್ಟಿ, ಪವಿತ್ರ, ಧನವತಿ,ಸವಿತಾ, ಸ್ಥಳೀಯರಾದ ಶಿವಾನಂದ, ಲೋಹಿತ್, ವಿಜಯ, ಪುಷ್ಪ,ವಿಶಾಲಾಕ್ಷಿ,, ಪುರುಷೋತ್ತಮ, ವಿಶ್ವನಾಥ, ಲಿಂಗಪ್ಪರವರು ಭಾಗವಹಿಸಿದರು.

ಶೌರ್ಯ ತಂಡದ ಈ ಸೇವೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದರು.

Share Article
Previous ಬಂಟ್ವಾಳ: ವಗ್ಗದಲ್ಲಿ ಸ್ವಚ್ಚತಾ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved