ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಲಂಕಾರು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಡ ಕುಟುಂಬದ ಮನೆ ರಚನೆಗೆ ಅಡಿಪಾಯ ಹಾಕುವ ಕೆಲಸವನ್ನು ಮಾಡಿದರು.

ಆಲಂಕಾರು ವಲಯದ ಶರವೂರು ಗ್ರಾಮದ ಎಲ್ಯಕ್ಕ ಎನ್ನುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮನೆ ಮಂಜೂರಾಗಿದ್ದು ಮನೆ ರಚನೆಗೆ ಪೂರಕವಾಗಿ ಪಾಯದ ಕೆಲಸವನ್ನು ಮಾಡಿದರು.

ಶ್ರಮದಾನದ ಸಂದರ್ಭದಲ್ಲಿ ಸೇವಾಪ್ರತಿನಿಧಿಯಾದ ಶ್ರೀಮತಿ ರೇಖಾ, ಅಲಂಕಾರು ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಯಾದ ಶ್ರೀ ಹರೀಶ್, ಸದಸ್ಯರಾದ ಧನಂಜಯ, ವೇಣುಗೋಪಾಲ, ಲೋಕೇಶ್, ಹರೀಶ್, ಅನಂದ ಪಿ,ಉಮೇಶ್, ಅನಂದ ಕೆ,ಭವಾನಿ, ಲೋಲಾಕ್ಷಿ,ಲಲಿತ, ನಳಿನಿ.ಪಿ ಶ್ರಮದಾನದಲ್ಲಿ ಪಾಲ್ಗೊಂಡರು.