ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ನೆಲ್ಯಾಡಿ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಶಾಲಾ ಕೈತೋಟ ರಚನೆ ಮತ್ತು ಶಾಲಾ ಪರಿಸರದಲ್ಲಿ ಸ್ವಚ್ಚತಾ ಕೆಲಸವನ್ನು ಮಾಡಿದರು.

ನೆಲ್ಯಾಡಿಯ ಪಿ ಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶ್ರಮದಾನ ನಡೆಸಲಾಯಿತು. ಶಾಲೆಯ ಆವರಣ ಸ್ವಚ್ಛತೆ, ಬಾಗಿದ ಮರದ ಗೆಲ್ಲುಗಳನ್ನು ಕಡಿಯಲಾಯಿತು , ಆವರಣದಲ್ಲಿ ಬೆಳೆದ ಹುಲ್ಲು ಗಳನ್ನು ಮಿಷನ್ ನಿಂದ ತೆಗೆದು, ಹಾಗೆಯೇ ಶಾಲಾ ಕೈತೋಟದಲ್ಲಿ ಪಾತಿ ಮಾಡಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಹಾಕಿ ಗೊಬ್ಬರ ಸೊಪ್ಪನ್ನು ಹಾಕುವಲ್ಲಿ ಎಲ್ಲಾ ಸ್ವಯಂ ಸೇವಕರು ಶ್ರಮಿಸಿದರು.

ಘಟಕದ ಸದಸ್ಯರಾದ ರಮೇಶ್ ಬಾಣಜಾಲು ಸಂತೋಷ್ ಕುಮಾರ್,ರಮೇಶ್ ಬಿ, ದಿನೇಶ್, ಬಾಲಕೃಷ್ಣಗೌಡ, ಜಯಂತಿ, ಹೇಮಾ ವಿ,ಗೀತಾ,ಕುಸುಮ ಕೆ, ನವೀನ್,ಫೆರ್ನಾಂಡಿಸ್, ಚಂದ್ರ ಕೆ ಯನ್ ಅನೀಶ್,ನಮಿತಾ ಶೆಟ್ಟಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಡುಪಿ ಪ್ರಾದೇಶಿಕ ವಿಭಾಗದ ಮೇಲ್ವಿಚಾರಕರಾದ ನಿತೇಶ್ ಉಪಸ್ಥಿತರಿದ್ದರು.
