ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳಿಕೆಯ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸ್ವಚ್ಚತೆ ಕೆಲಸ ಮಾಡಿದರು.

ಅಳಿಕೆಯ ಸಮುದಾಯ ಆರೋಗ್ಯ ಕೇಂದ್ರದ ಸುತ್ತ ಮುತ್ತಲಿನ ಪರಿಸರದಲ್ಲಿ ಅನಗತ್ಯವಾಗಿ ಹುಲ್ಲು, ಗಿಡಗಂಟಿಗಳು ಬೆಳೆದುನಿಂತಿದ್ದವು. ಸ್ವಯಂಪ್ರೇರಣೆಯಿಂದ ತೆರವಿಗೆ ನಿರ್ಧರಿಸಿದ ಸ್ವಯಂಸೇವಕರು ಒಂದು ದಿನದ ಶ್ರಮದಾನ ನಡೆಸಿದರು.
ಶ್ರಮದಾನದ ಸಂದರ್ಭ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಅಳಿಕೆ ಒಕ್ಕೂಟದ ಸೇವಾ ಪ್ರತಿನಿಧಿ ಚಂದ್ರಾವತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಶೌರ್ಯ ಘಟಕದ ಸದಸ್ಯರಾದ ಪುಟ್ಟಣ್ಣ, ಅಮಿತ, ರವೀಶ್, ಗಣೇಶ್, ಲೋಕೇಶ್, ಸರಸ್ವತಿ, ಲಕ್ಷ್ಮಣ್, ಕುಶಾಲಪ್ಪ, ದೀಪಕ್ ಶ್ರಮದಾನದಲ್ಲಿ ಭಾಗವಹಿಸಿದರು.