ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮುಡಿಪುವಿನ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಗೋವುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಹುಲ್ಲು ಕಟಾವು ಮಾಡಿ ಗೋಶಾಲೆಗೆ ತಲುಪಿಸಿದರು.

ಕಂಬಳಪದವು ಮಾರ್ಗ ಬದಿಯಲ್ಲಿ ಬೆಳೆದ ಹುಲ್ಲು ಕಟಾವು ಮಾಡಿ ಪುಣ್ಯ ಕೋಟಿನಗರದ ಅಮೃತ ಧಾರ ಗೋಶಾಲೆಗೆ ತಲುಪಿಸಿರುತ್ತಾರೆ.
ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಗೋಶಾಲೆ ಸಮಿತಿ ಸದಸ್ಯರಾದ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು

ಶೌರ್ಯ ಘಟಕದ ಸದಸ್ಯರಾದ ರವೀಂದ್ರ ನಾಗೇಶ್ ರತ್ನ ಸುಮಿತ ಮೋಹನ್ ದಾಸ್ ಮಾಲಾತೆಸ್ ಮಮತ ಗೀತಾ ಜಯರಾಮ್ ಆಚಾರ್ಯ ಮನೋಜ್ ಸತೀಶ್ ಉಮೇಶ್ ಶಕೀಲಾ ಶ್ರಮದಾನದಲ್ಲಿ ಪಾಲ್ಗೊಂಡರು.