ಎನ್.ಡಿ.ಆರ್.ಎಫ್ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ರವರಿಗೆ ಶೌರ್ಯ ಮಾರ್ಗದರ್ಶಕ್ ಪ್ರಶಸ್ತಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ( ಎನ್.ಡಿ.ಆರ್.ಎಫ್) ಇನ್ಸ್ಪೆಕ್ಟರ್ ಶ್ರೀ ಶಾಂತಿಲಾಲ್ ಜಟಿಯ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳ ವತಿಯಿಂದ “ಶೌರ್ಯ ಮಾರ್ಗದರ್ಶಕ್” ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿಯನ್ನು   ದಿನಾಂಕ: 26.09.2026 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀಡಿ ಗೌರವಿಸಿದರು.

ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ತಾಲ್ಲೂಕುಗಳ ವಿಪತ್ತು ನಿರ್ವಹಣಾ ಸಮಿತಿಗಳಿಗೆ 2021 ರಿಂದ 2026 ರ ವರೆಗೆ ಎನ್.ಡಿ.ಆರ್.ಎಫ್ ಪಡೆಯು ಶಾಂತಿಲಾಲ್ ಜಟಿಯ  ಇವರ ನೇತ್ರತ್ವದಲ್ಲಿ  100 ಕ್ಕೂ ಅಧಿಕ ವಿಪತ್ತು ನಿರ್ವಹಣಾ ತರಬೇತಿಗಳನ್ನು ನಡೆಸಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂಸೇವಕರಿಗೆ ಎನ್.ಡಿ.ಆರ್.ಎಫ್ ತಂಡವು ತರಬೇತಿಯನ್ನು ನೀಡಿದ್ದು ತರಬೇತಿ ಪಡೆದ ಸ್ವಯಂಸೇವಕರು ವಿಪತ್ತು ನಿರ್ವಹಣಾ ಕೌಶಲ್ಯವನ್ನು ಕಲಿತುಕೊಂಡು ತಮ್ಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ.

ದ.ಕ, ಉ.ಕ, ಕೊಡಗು, ಚಿಕ್ಕಮಗಳೂರು, ಹಾಸನ, ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸಂಚರಿಸಿ ಪ್ರವಾಹದ ಕುರಿತಂತೆ ಅಣಕು ಕಾರ್ಯಾಚರಣೆಗಳು, ಬೆಂಕಿ ಅವಗಢಗಳ ನಿಯಂತ್ರಣೆ, ರಸ್ತೆ ಅಪಘಾತಗಳಿಗೆ ಸ್ಪಂದನೆ, ಸಿ.ಪಿ.ಆರ್ ವಿಧಾನಗಳು, ತುರ್ತು ಸಹಾಯವಾಣಿಗಳಿಗೆ ಸಂಪರ್ಕಿಸುವ ವಿಧಾನಗಳು ಹೀಗೆ ವಿವಿಧ ವಿಷಯಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿಯನ್ನು ನೀಡಿದ ಶಾಂತಿಲಾಲ್ ಜಟಿಯ ಇವರ ತಂಡದ ಸಾಮಾಜಿಕ ಕಳಕಳಿ ಮತ್ತು ಬದ್ದತೆಯನ್ನು ಪರಿಗಣಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ “ಶೌರ್ಯ ಮಾರ್ಗದರ್ಶಕ್” ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯದಲ್ಲಿ 90 ತಾಲ್ಲೂಕುಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳಿದ್ದು 7704 ಸ್ವಯಂಸೇವಕರು ನೋಂದಾವಣಿಗೊಂಡಿರುತ್ತಾರೆ.

ಪ್ರಶಸ್ತಿ ವಿತರಣೆಯ ಸಂದರ್ಭದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಡಾ.ಹೇಮಾವತಿ ವಿ.ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್ ರವರು, ಮುಖ್ಯ ಹಣಕಾಸು ಅಧಿಕಾರಿಯವರಾದ ಶ್ರೀ ಶಾಂತಾರಾಮ್ ಪೈ, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್.ವಿ ಪಾಯ್ಸ್, ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಶ್ರೀ ಯಶೋಧರ ಉಪಸ್ಥಿತರಿದ್ದರು.

Share Article
Previous ಉಡುಪಿ: ಗೋಶಾಲೆಗೆ ಮೇವು ಸಂಗ್ರಹಿಸಿ ನೀಡಿದ ಮಣಿಪಾಲ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved