ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಡುಪಿ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಣಿಪಾಲದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಗೋವುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಹುಲ್ಲು ಕಟಾವು ಮಾಡಿ ಗೋಶಾಲೆಗೆ ತಲುಪಿಸಿದರು.

ಮಣಿಪಾಲದ ಮಣ್ಣಪಲ್ಲದ ಹತ್ತಿರದಲ್ಲಿದ್ದ ಹುಲ್ಲುಗಳನ್ನು ಕಟಾವು ಮಾಡಿದ ಸ್ವಯಂಸೇವಕರು ಸಂಗ್ರಹಿಸಿದ ಮೇವನ್ನು ನೀಲಾವರ ಗೋಶಾಲೆಗೆ ನೀಡಿರುತ್ತಾರೆ.
ಘಟಕದ ಸದಸ್ಯರಾದ ಹರೀಶ್ ಎನ್, ಬಾಲಕೃಷ್ಣ, ರಮಾನಂದ, ಲೋಕೇಶ್, ಬಸವರಾಜ್ ಗಣಿ, ಶ್ರೀಮತಿ ರಾಜೇಶ್ವರಿ, ವಿದ್ಯಾ ಶ್ರಮದಾನದಲ್ಲಿ ಭಾಗವಹಿಸಿದರು.

ಸ್ವಯಂಸೇವಕರ ಸೇವೆಗೆ ಗೋಶಾಲೆಯ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿರುತ್ತಾರೆ.