ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸುಳ್ಯ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಕುಂಟುಮಾಯ ಅರಣ್ಯ ಪ್ರದೇಶದಲ್ಲಿ ಹಣ್ಣು ಹಂಪಲು ಗಿಡ ನಾಟಿ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಕಳೆದ ವರ್ಷ ಸುಮಾರು 500 ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಿದ್ದರು. ಈ ಎಲ್ಲಾ ಗಿಡಗಳ ಪೋಷಣೆ ಮಾಡುವ ಕೆಲಸವನ್ನು ಸ್ವಯಂಸೇವಕರು ನಡೆಸಿದರು.
ಗಿಡಗಳ ಕಳೆ ತೆಗೆದು ಮಣ್ಣು ಸವರಿ ನೀರಿಂಗಿಸುವ ಕಾರ್ಯ ಮತ್ತು ಸೊಪ್ಪುಹಾಕಿ ಗಿಡಗಳ ನಿರ್ವಹಣೆ ಮಾಡಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ನಾಟಿ ಮಾಡಿದ ಗಿಡಗಳು ಬೆಳೆಯದೇ ಇರುವ ಸ್ಥಳದಲ್ಲಿ ಹೊಸದಾಗಿ ಗಿಡಗಳನ್ನು ನಾಟಿ ಮಾಡಲಾಯಿತು.
ಶೌರ್ಯ ಘಟಕದ ಸದಸ್ಯರಾದ ಲೋಹಿತ್, ಕರುಣಾಕರ, ಸತೀಶ್, ಚಂದ್ರಶೇಖರ, ಭರತ್, ದೀಪಕ್, ಭವಾನಿ, ಜಯಶ್ರೀ, ಚಂದ್ರಿಕಾ, ಕಾರ್ತಿಕ್, ಅಶ್ವಥ್, ಪ್ರಜ್ವಲ್, ಹರಿಶ್ಚಂದ್ರ ಶ್ರಮದಾನದಲ್ಲಿ ಭಾಗವಹಿಸಿದರು.

ವಲಯ ಮೇಲ್ವಿಚಾರಕರಾದ ರಾಜೇಶ್, ಒಕ್ಕೂಟದ ಅಧ್ಯಕ್ಷರಾದ ಕರುಣಾಕರ ಸಂಪ್ಯಾಡಿ, ಘಟಕ ಪ್ರತಿನಿಧಿ ಲೋಹಿತ್ ಚೆಮ್ನೂರು ಹಾಗೂ ಸ್ವಂಸೇವಕರರು ಭಾಗವಹಿಸಿದರು.