ಕರಾವಳಿ ಕಲ್ಯಾಣ ಪರಿಷತ್, ಪರ್ಯಾವರಣ ಮಂಗಳೂರು ಹಾಗೂ ಮಹಾನಗರ ಪಾಲಿಕೆ ಮಂಗಳೂರು ವತಿಯಿಂದ ನಡೆದ ಸ್ವಚ್ಛತಾ ಹಿ ಸೇವಾ 2026 ಕಾರ್ಯಕ್ರಮದಲ್ಲಿ ಸುರತ್ಕಲ್ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಭಾಗವಹಿಸಿ ಬೀಚ್ ಸ್ವಚ್ಚತೆ ನಡೆಸಿದರು.

ಸ್ವಚ್ಛ ಸಾಗರ ಸುರಕ್ಷಿತ ಸಾಗರ ಎನ್ನುವ ಪರಿಕಲ್ಪನೆಯಲ್ಲಿ ಕಡಲ ಕಿನಾರೆಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು, ಮೀನಿನ ಬಲೆಗಳು ಮತ್ತು ಇನ್ನಿತರ ತ್ಯಾಜ್ಯ ವನ್ನು ಸಂಗ್ರಹಿಸಿ ಮಹಾನಗರ ಪಾಲಿಕೆಯ ವಾಹನ ಗಳಿಗೆ ತುಂಬಿಸಲಾಯಿತು.

ಘಟಕದ ಸಂಯೋಜಕಿ ಜಯಂತಿ, ಘಟಕ ಪ್ರತಿನಿಧಿ ಭಾಗ್ಯವತಿ, ಸ್ವಯಂಸೇವಕರಾದ ಪವನ್ ಕುಮಾರ್ ,ರೋಹಿತ್, ಪ್ರಸಾದ್ ,ಅಭಿಷೇಕ್, ಶಾಂತ, ಜಯರಾಮ್, ಭಾರತಿ , ಪದ್ಮನಾಭ ಶ್ರಮದಾನದಲ್ಲಿ ಭಾಗವಹಿಸಿದರು.