ವನ್ಯಜೀವಿ ಕಾಳಜಿ ಮತ್ತು ಕಾಳ್ಗಿಚ್ಚು ಜಾಗೃತಿ ಅಭಿಯಾನ

ಬೆಳ್ತಂಗಡಿ, ಮಾರ್ಚ್ 08, 2025: ಶೌರ್ಯ  ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ -ಶಿಶಿಲ ಮತ್ತು ಕರ್ನಾಟಕ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಜಂಟಿ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಮತ್ತು ಕಾಳ್ಗಿಚ್ಚು ಮುಂಜಾಗೃತಿ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಯಿತು.

ಉಪ್ಪಿನಂಗಡಿ ಅರಣ್ಯ ವಲಯದ ಕಾಡಂಚಿನ ಶಾಲೆಗಳಾದ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆ ಅರಸಿನಮಕ್ಕಿ,ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿ,ಶಿಶಿಲ ಶಾಲೆ ,ಕೊಳಕ್ಕೆಬೈಲು ಶಾಲಾ ವಿದ್ಯಾರ್ಥಿಗಳಿಗೆ ಪರಿಸರದೊಂದಿಗೆ ವನ್ಯಜೀವಿ ಸಂರಕ್ಷಣೆ ಮತ್ತು ಕಾಡ್ಗಿಚ್ಚು ಸಂಭವಿಸದಂತೆ ಅನುಸರಿಸುವ ಮುಂಜಾಗೃತಾ ಕ್ರಮಗಳು ಮತ್ತು ಕಾಡ್ಗಿಚ್ಚು ಕಂಡುಬಂದಲ್ಲಿ ಯಾವ ರೀತಿಯಾಗಿ ಅರಣ್ಯ ಇಲಾಖೆಯ ಸಂಪರ್ಕದೊಂದಿಗೆ ಸೇರಿಕೊಂಡು ಅದನ್ನು ಹತೋಟಿಗೆ ತರಬಹುದು ಎಂಬುದರ ಬಗ್ಗೆ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯ ಸುರೇಶ್ ಶಿಬಾಜೆ ವಿವರಿಸಿದರು.

ಅರಣ್ಯಾಧಿಕಾರಿ ನಾಗಲಿಂಗ ಮತ್ತು ಸಚಿನ್ ಇವರು ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಉಂಟಾಗುವ ನೀರಿನ ಕೊರತೆಗೆ ನಾಗರಿಕ ಸಮಾಜದಿಂದ ಯಾವ ರೀತಿಯ ಸಹಾಯ ಮಾಡಬಹುದೆಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಜಾಗೃತಿಗಾಗಿ ಕರಪತ್ರಗಳನ್ನು ಹಂಚಲಾಯಿತು.ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ,ಘಟಕ ಪ್ರತಿನಿಧಿ ಆನಂದ ನಾಯ್ಕ,ರಮೇಶ್ ಭೈರಕಟ್ಟ,ಅವಿನಾಶ್ ಭಿಡೆ,ಶೀನಪ್ಪ ಶಿಶಿಲ ಅಭಿಯಾನದಲ್ಲಿ ಸಹಕಾರ ನೀಡಿದರು.

ಶಿಶಿಲ ಶಾಲೆಯಲ್ಲಿ ಅಭಿಯಾನದ ಸಮಯದಲ್ಲಿ ಕಳೆದ ವರ್ಷ ಕಾಡ್ಗಿಚ್ಚು ಉಂಟಾದ ಸಮಯದಲ್ಲಿ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿದ ಮನೀಷ್ ಎಂಬ  ಬಾಲಕನನ್ನು ಅರಣ್ಯಾಧಿಕಾರಿ ಸಚಿನ್ ಶ್ಲಾಘಿಸಿದರು.
 

Share Article
Previous ಕುಡಿಯುವ ನೀರಿನ ಬಾವಿ ಸ್ವಚ್ಚತೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved