
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ: 01.02.2026 ರಂದು ಕುಂದಾಪುರ ತಾಲ್ಲೂಕಿನ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಭಾ ಭವನದಲ್ಲಿ ಭಾರತೀಯ ರೇಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಅವರ ಸಹಕಾರದೊಂದಿಗೆ ಸ್ವಯಂಪ್ರೇರಿತ ಬ್ರಹತ್ ರಕ್ತ ದಾನ ಶಿಬಿರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ 6 ಮಂದಿ ಸ್ವಯಂಸೇವಕರು ರಕ್ತದಾನ ಮಾಡಿದರು.

ಕುಂದಾಪುರ ತಾಲೂಕಿನ ಯೋಜನಾಧಿಕಾರಿ ನಾರಾಯಣ ಪಾಲನ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತೆಕ್ಕಟ್ಟೆ ವಲಯದ ಮೇಲ್ವಿಚಾರಕರಾದ ರಾಧಿಕ, ಸೇವಾಪ್ರತಿನಿಧಿ ಉಷಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.
ಘಟಕಪ್ರತಿನಿಧಿ ರಾಜೀವಿ, ಸ್ವಯಂಸೇವಕರಾದ ನಾಗೇಶ್, ಸುಕುಮಾರ್ ಶೆಟ್ಟಿ, ಸುಧೀರ, ಪ್ರಸಾದ, ಜ್ಯೋತಿ ಇದ್ದರು.

ವರದಿ: ರಾಜೀವಿ
ಬೇಳೂರು: ಘಟಕಪ್ರತಿನಿಧಿ