
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಕೇರಿ ಗ್ರಾಮದ ನಿವಾಸಿ ಕೂಲಿಕಾರ್ಮಿಕೆ ಜಾಜಿ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಮಂಜೂರಾಗಿರುತ್ತದೆ.
ಆರ್ಥಿಕವಾಗಿ ಬಹಳ ಕಷ್ಠದಲ್ಲಿರುವ ಇವರು ತೀರಾ ಹಳೆಯದಾದ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ವಾಸವಾಗಿದ್ದರು. ಮಳೆ, ಗಾಳಿಯಲ್ಲಿ ತೀರಾ ಕಷ್ಠದಲ್ಲಿ ವಾಸವಾಗಿದ್ದರು. ಇವರ ಪರಿಸ್ಥಿತಿಯನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತೃಶ್ರೀ ಅಮ್ಮನವರ ಪರಿಕಲ್ಪನೆಯ “ವಾತ್ಸಲ್ಯ” ಕಾರ್ಯಕ್ರಮವಾದ ಅಡಿಯಲ್ಲಿ ಮನೆ ಮಂಜೂರಾತಿ ನೀಡಿದೆ.

ಹೊಸ ಮನೆ ರಚನೆ ಮಾಡಬೇಕಾದ ಸ್ಥಳವನ್ನು ಶುಚಿಗೊಳಿಸಿ, ಮನೆಗೆ ಅಡಿಪಾಯ ರಚನೆಯ ಕೆಲಸವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನಡೆಸಿದರು.
ಮಡಿಕೇರಿ ಸಮಿತಿಯ ಮಾಸ್ಟರ್ ಬಾಳೆಯಡ ದಿವ್ಯಾ ಮಂದಪ್ಪ, ಸೇವಾಪ್ರತಿನಿಧಿ ಪ್ರಭಾ, ಮತ್ತು ನಾಪೋಕ್ಲು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.
