
ಮೂಡಿಗೆರೆ, ಎಪ್ರಿಲ್ ೦೬: “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ ಖಾಂಡ್ಯ ವಲಯದ ವತಿಯಿಂದ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವೈದ್ಯರಾದ ಡಾ. ಪ್ರಶಾಂತ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಖಾಂಡ್ಯ ಹೋಬಳಿಯ ಸ್ನೇಹ ಜೀವಿ ಬಂಧುಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಜೇನಗದ್ದೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿತ್ತು. ಇದರಲ್ಲಿ ಉಚಿತ ಕಣ್ಣಿನ ತಪಾಸಣೆ, ದಂತ ತಪಾಸಣೆ, ರಕ್ತದಾನ ಮುಂತಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮೂಡಿಗೆರೆ ತಾಲೂಕಿನ ಸುತ್ತಮುತ್ತಲಿನವರು ಈ ತಪಾಸಣೆ ಶಿಬಿರದ ಪ್ರಯೋಜನ ಪಡೆದಿದ್ದಾರೆ. ಕಡಬಗೆರೆ, ದೇವಾದನ, ಕಡವಂತಿ, ಬಿದರೆ, ಹುಯಿಗೆರೆ, ಒಳಗೊಡು, ಕುಂಬರ ಕೋಡು, ಬೆಳಸೆ, ಬೆಟ್ಟದ ಮಳಲಿ, ಕರಗಣೆ, ಹುಣಸೆ, ಹಳ್ಳಿ ಗೋರಿಗಂಡಿ, ಮಾಗಲೂ ಸಂಗಮೇಶ್ವರ ಪೇಟೆ, ಕಿಚ್ಚಬ್ಬಿ , ಹಾರಂಬಿ, ಬಾಸಪುರ, ಚಂದ್ರವಳ್ಳಿ, ಬಾಳೆಹೊನ್ನೂರು,ಜ್ಜಂಪುರ, ಹೊನ್ನೇಕೊಪ್ಪ ಮುಂತಾದ ಗ್ರಾಮದವರು ಪ್ರಯೋಜನ ಪಡೆದುಕೊಂಡಿದ್ದಾರೆ.

ಸಂಯೋಜಕರಾದ ಚಂದ್ರಶೇಖರ್ ರೈ, ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ರಘುಪತಿ ವಿ ಸಿ ಬಿದರೆ, ಕೃಷ್ಣ, ಪಲ್ಲವಿ, ಮಲ್ಲಿಕಾಸಂಯೋಜಕ ಪ್ರವೀಣ ಶೆಟ್ಟಿ, ಮಂಜುನಾಥ, ಮಹೇಶ್, ರಚನ್ ಅವರು ಇಂದಿನ ಆರೋಗ್ಯ ತಪಾಸಣೆ ಶಿಬಿರ ಆಯೋಜನೆಗೆ ಕಾರಣರಾದವರು. ವಲಯದ ಮೇಲ್ವಿಚಾರಕರರು ಹಾಗೂ ಸೇವಾಪ್ರತಿನಿಧಿಗಳು ತಮ್ಮ ಕೊಡುಗೆ ನೀಡಿದರು. ತಾಲ್ಲೂಕಿನ ಯೋಜನಾಧಿಕಾರಿಯವರಾದ ವಿಠ್ಠಲ ಪೂಜಾರಿ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಮೇಲ್ವಿಚಾರಕರಾದ ಶಿವರಾಜ್ ಉಪಸ್ಥಿತರಿದ್ದರು.