
ಧಾರವಾಡ, ಅಗಸ್ಟ್14: ಮುಗದ ಗ್ರಾಮದಬುಡ್ಡೇಸಾಬ್ ರೋಣ ಅವರ ಮನೆಯು ಅತಿಯಾದ ಮಳೆಯಿಂದ ಕುಸಿದು ಬಿದ್ದಿದೆ. ಶ್ರೀ ಧರ್ಮಸ್ಥಳ ಸೇವಾ ಘಟಕದ ಸ್ವಯಂಸೇವಕರು ಸಹಾಯ ಮಾಡಬಹುದೇ ಎಂದು ಮುಗದ ಗ್ರಾಮ ಪಂಚಾಯತಿ ಯ ಕರ ವಸೂಲಿಗಾರರಾದ ಶ್ರೀ ನಾಗರಾಜ್ ಅವರು ವಿನಂತಿಸಿಕೊಂಡಾಗ ಮುಗದ ಘಟಕದ ಸ್ವಯಂಸೇವಕರು ಬುಡ್ಡೇಸಾಬ್ ಅವರ ಮನೆ ಭೇಟಿ ಮಾಡಿದರು.ಮನೆಯೊಳಗೆ ಕಲ್ಲು, ಮಣ್ಣು, ಕಟ್ಟಿಗೆಗಳು ಬಿದ್ದಿದ್ದು ಮನೆ ತೀರಾ ಹಾಳಾಗಿರುತ್ತದೆ. ವಾಸಕ್ಕೆ ಕಷ್ಟ ಎನ್ನುವುದನ್ನು ಅರಿತ ಆ ಕುಟುಂಬ ದವರು ಬೇರೆ ಮನೆಯಲ್ಲಿ ವಾಸ್ತವ್ಯ ಹೊಂದಿರುತ್ತಾರೆ.ಬುಡ್ಡೇಸಾಬ್ ರೋಣ ಅವರು ಮನೆಯಲ್ಲಿ ಇಲ್ಲದ ಕಾರಣದಿಂದ ಸ್ವಚ್ಚತಾ ಕಾರ್ಯ ಮಾಡಲು ಸಾಧ್ಯವಾಗಲಿಲ್ಲ. ವಾರದ ಒಳಗೆ ಸ್ವಚ್ಚತಾ ಕಾರ್ಯ ನಡೆಸಲು ಆ ಕುಟುಂಬಕ್ಕೆ ಸಹಕಾರ ನೀಡುವುದಾಗಿ ಸ್ವಯಂಸೇವಕರು ನಿರ್ಧರಿಸಿರುತ್ತಾರೆ.ಸ್ವಯಂಸೇವಕರಾದ ಮೇಘಾ, ಸುಮನ್, ಅನಿಲ್, ನಾಗರಾಜ್ , ರಾಘವೇಂದ್ರ, ಹಣಮಂತ, ಶಿವಾನಂದ್, ಹಠೇಲ್ ಭಾಷಾ ಸೇವಾಕಾರ್ಯ ದಲ್ಲಿ ತೊಡಗಿಕೊಂಡ ಸ್ವಯಂಸೇವಕರು.ಗ್ರಾಮ ಪಂಚಾಯತ್ ಕರ ವಸೂಲಿಗಾರರಾದ ಶ್ರೀ ನಾಗರಾಜ್ ಅವರು ಸ್ಥಳದಲ್ಲಿ ಇದ್ದು ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿಷಯವನ್ನು ತಿಳಿಸಿರುತ್ತಾರೆ.