
ಮೂಡಿಗೆರೆ, ಏಪ್ರಿಲ್ ೧೦: ಹೆಸಗಲ್ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಎಂಟು ಗ್ರಾಮಗಳಿಗೆ ತೆರಳಿ ಜನಜಾಗೃತಿ ಗೊಳಿಸಲಾಯಿತು. ೪೪ ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ, ನೀಡುವ ಕಾರ್ಯಕ್ರಮದ. ಪ್ರಚಾರಕಾರ್ಯವನ್ನು ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಂಜುನಾಥ್ ಇವರು ತಮ್ಮ ಆಟೋ ವಾಹನದಲ್ಲಿ ಪ್ರಚಾರ ಮಾಡಿರುತಾರೆ.ಹಾಗೆಯೇ ನಾಳೆ ಮನೆಮನೆಯ ಅಂಗಳಕ್ಕೆ ನಮ್ಮ ಕಾರ್ಯಕರ್ತರು ಬರುತ್ತಾರೆ ಎಂಬ ಮಾಹಿತಿ ಸಹ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರವೀಣ್ ಪೂಜಾರಿ ಅರುಣ್ ಪಿಂಟೋ ಮಂಜುನಾಥ್ ಹಾಗೂ ಹೆಸಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸರ್ವ ಸದಸ್ಯರು. ಸಹಕಾರ ನೀಡಿರುತಾರೆ.