
ಧಾರವಾಡ, ಅಗಸ್ಟ್14: ಮುಗದ ಗ್ರಾಮದಸುರೇಶ ಬಂಡಿವಡ್ಡರ್ ಅವರ ಮನೆಯು ಅತಿಯಾದ ಮಳೆಯಿಂದ ಕುಸಿದು ಬಿದ್ದಿದ್ದು ಶ್ರೀ ಧರ್ಮಸ್ಥಳ ಸೇವಾ ಮುಗದ ಘಟಕದ ಸ್ವಯಂಸೇವಕರು ಅವರ ಮನೆ ಭೇಟಿ ಮಾಡಿ ಮನೆಯ ಸ್ವಚ್ಚತಾ ಕಾರ್ಯ ನೆರವೇರಿಸಿದರು.ಮನೆಯೊಳಗೆ ಬಿದ್ದಿರುವ ಕಲ್ಲು, ಮಣ್ಣು ತೆರವುಗೊಳಿಸಿ ಮನೆಯೊಳಗೆ ನೀರು ಸೋರದಂತೆ ತಡಪತ್ರೆ ಕಟ್ಟಿದರು. ಸ್ವಯಂಸೇವಕರ ಈ ಕಾರ್ಯಕ್ಕೆ ಸ್ಥಳೀಯರಾದ ನೂರಾಜನ್ ಅಯ್ಯುಬ ಅವರು ಬೆಂಬಲ ನೀಡಿರುತ್ತಾರೆ.ಸ್ವಯಂಸೇವಕರಾದ ಮೇಘಾ, ಸುಮನ್, ಅನಿಲ್, ನಾಗರಾಜ್ , ರಾಘವೇಂದ್ರ, ಹಣಮಂತ, ಶಿವಾನಂದ್, ಹಠೇಲ್ ಭಾಷಾ ಸೇವಾಕಾರ್ಯ ದಲ್ಲಿ ತೊಡಗಿಕೊಂಡ ಸ್ವಯಂಸೇವಕರು. ಸೇಪ್ರತಿನಿಧಿ ಮಂಜುಳಾ, ಭಾರತಿ ಸ್ಥಳದಲ್ಲಿ ಉಪಸ್ಥಿತರಿದ್ದು ಸಹಕಾರ ನೀಡಿರುತ್ತಾರೆ. ಗ್ರಾಮ ಪಂಚಾಯತ್ ಕರ ವಸೂಲಿಗಾರರಾದ ಶ್ರೀ ನಾಗರಾಜ್ ಅವರು ಸ್ಥಳದಲ್ಲಿ ಇದ್ದು ಸ್ವಯಂಸೇವಕರೊಂದಿಗೆ ಸೇವಾಕಾರ್ಯದಲ್ಲಿ ಕೈಜೋಡಿಸಿದರು.
