ಪುತ್ತೂರು: ಬೀಳುವ ಸ್ಥಿತಿಯಲ್ಲಿದ್ದ ಮನೆಯ ಮೇಲ್ಛಾವಣಿ; ರಿಪೇರಿ ಮಾಡಿದ ಅರಿಯಡ್ಕ ಶೌರ್ಯ ತಂಡ

ಅರಿಯಡ್ಕ ಸಮೀಪದ ಪಾಪೇಮಜಲುವಿನಲ್ಲಿ ವಾಸವಿರುವ ಬಡ ಕುಟುಂಬದ ನೀಲಮ್ಮ(ಪಾರ್ವತಿ) ಇವರ ಮನೆಯ ಮೇಲ್ಛಾವಣಿ  ಬೀಳುವ ಸ್ಥಿತಿಯಲ್ಲಿತ್ತು.

ಮಳೆಗಾಲದ ಅತಿಯಾದ ಮಳೆ ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವ ಅಪಾಯವಿತ್ತು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಮನೆಯನ್ನು ಪರಿಶೀಲಿಸಿದ ಶೌರ್ಯ ತಂಡದ ಸದಸ್ಯರು ಬಡ ಕುಟುಂಬವಾದ ನೀಲಮ್ಮ ರವರ ಮನೆಯನ್ನು ರಿಪೇರಿ ಮಾಡಿಕೊಟ್ಟಿದ್ದಾರೆ.

ಜನಜಾಗೃತಿಯ ವಲಯಾಧ್ಯಕ್ಷರಾದ ತಿಲಕ್ ರೈ ಕುತ್ಯಾಡಿ, ವಲಯದ ಒಕ್ಕೂಟದ  ಮಾಜಿ  ಅಧ್ಯಕ್ಷರಾದ ರಾಮ ಮಣಿಯಾಣಿ ಇವರು ಉಪಸ್ಥಿತರಿದ್ದು  ಶೌರ್ಯ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಲಯದ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಕೆಲಸವನ್ನು ಮಾಡಿರುತ್ತಾರೆ.

ಘಟಕದ ಸದಸ್ಯರಾದ ವಸಂತಿ, ಶಿವಶಂಕರ, ಗಣೇಶ್,ಹರಿಪ್ರಸಾದ್, ರಮೇಶ್ ರೈ,ರಾಘವ ಗೌಡ,ವಸಂತ,ರಮಾನಂದ, ರಾಜೇಶ್,ಲೀಲಾವತಿ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಪುತ್ತೂರು: ಬಡ ಕುಟುಂಬಕ್ಕೆ ಮನೆ ನಿರ್ಮಾಣ; ಶೌರ್ಯ ತಂಡದಿಂದ ಶ್ರಮದಾನ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved