ಬೆಳ್ತಂಗಡಿ, ಡಿಸೆಂಬರ್ 27, 2022 ರ ಮಧ್ಯಾಹ್ನ 11.30 ರ ವೇಳೆಗೆ ನಿಡ್ಲೆ ಸಮೀಪದ ಬೂಡಜಾಲುವಿನಲ್ಲಿ ಸಿಂಧನೂರು ತಾಲ್ಲೂಕಿನಿಂದ ಶೈಕ್ಷಣಿಕ ಪ್ರವಾಸಕ್ಕೆ ಬಂದ ಪಿ.ಯು ಕಾಲೇಜು ವಿದ್ಯಾರ್ಥಿಗಳ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಎರಡೂ ಬಸ್ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಸುಮಾರು ೩೦ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ರಸ್ತೆ ಅಪಘಾತದ ಸ್ಥಳದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರ ಮನೆಗಳು ಇದ್ದುದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ಎರಡೂ ವಾಹನ ಚಾಲಕರನ್ನು ತಮ್ಮ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಿರುತ್ತಾರೆ.
ಸ್ವಯಂಸೇವಕರಾದ ಮನೋಹರ್ ಇವರು ತಮ್ಮ ಸ್ವಂತ ಬಳಕೆಯ ಸ್ವಿಫ್ಟ್ ಕಾರ್ ನಲ್ಲಿ ಕಾಲು ತುಂಡರಿಸಿ ರಕ್ತದ ಮಡುವಿನಲ್ಲಿದ್ದ ಗಾಯಾಳುವನ್ನು ನೆಲ್ಯಾಡಿಯ ಅಶ್ವಿನಿ ಕ್ಲಿನಿಕ್ ಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿರುವುದರಿAದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ. ಅಪಘಾತವಾದ ಬಸ್ ನಲ್ಲಿ ಸುಮಾರು ನಲವತ್ತೆöÊದಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಹಲವರಿಗೆ ಸಣ್ಣ ಪುಟ್ಟ ಗಾಯವಾದ ಹಿನ್ನೆಲೆಯಲ್ಲಿ ತುರ್ತಾಗಿ ನಾಲ್ಕರಿಂದ ಐದು ಆಂಬುಲೆನ್ಸ್ ಗಳನ್ನು ಕರೆಯಿಸಿ ವಿದ್ಯಾರ್ಥಿಗಳನ್ನು ಉಜಿರೆಯ ಎಸ್.ಡಿ.ಎಮ್ ಆಸ್ಪತ್ರೆಗೆ ತುರ್ತಾಗಿ ಕಳುಹಿಸಲು ವ್ಯವಸ್ಥೆ ಮಾಡಿರುತ್ತಾರೆ.
ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಉಳಿದ ವಿದ್ಯಾರ್ಥಿಗಳಿಗೆ ವಿರಮಿಸಲು ಸ್ಥಳದ ಸಮಸ್ಯೆಯಾಗಿರುವುದನ್ನು ಗಮನಿಸಿದ ವಿಪತ್ತು ನಿರ್ವಹಣಾ ಘಟಕ ಉಜಿರೆಯ ಸ್ವಯಂಸೇವಕರು ಉಜಿರೆಯ ಶಾರದಾ ಮಂಟಪದಲ್ಲಿ ತಂಗುವ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲದೇ ರಾತ್ರಿಯ ಊಟದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಛತ್ರದಿಂದ ತಂದು ನೀಡಿರುತ್ತಾರೆ. ಸುಮಾರು ೧೪೦ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸುಮಾರು ೧೬೦ ಮಂದಿಗೆ ಸಹಕಾರ ನೀಡಿರುತ್ತಾರೆ.
ನಿಡ್ಲೆ ಧರ್ಮಸ್ಥಳ ಘಟಕದ ಸಂಯೋಜಕರಾದ ಕೊರಗಪ್ಪ, ಘಟಕ ಪ್ರತಿನಿಧಿ ಗಿರೀಶ್, ಬೆಳ್ತಂಗಡಿ ಸಮಿತಿಯ ಮಾಸ್ಟರ್ ಸ್ನೇಕ್ ಪ್ರಕಾಶ್, ನಳಿನ್ ಕುಮಾರ್ ಬೇಕಲ್ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.