ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಗ್ರಾಮದ ಬಡ ಕುಟುಂಬದ ಮನೆಯ ಮೇಲ್ಚಾವಣಿ ಅತಿಯಾದ ಗಾಳಿ ಮಳೆಯಿಂದ ಹಾನಿಯಾದ ಘಟನೆ ನಡೆದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯದ ಮೇಲ್ವಿಚಾರಕರು ನೀಡಿದ ಮಾಹಿತಿಯಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕುಕ್ಕಾವಿನ ಸದಸ್ಯರು ಸ್ಥಳಕ್ಕೆ ತೆರಳಿ ಮನೆ ರಿಪೇರಿ ಮಾಡಿಕೊಡಲು ಸಹಕಾರ ನೀಡಿದ್ದಾರೆ.

ಅಲ್ಲದೇ ಮನೆಯ ಸ್ವಚ್ಚತೆಗೂ ಸಹಕಾರ ನೀಡಿದ್ದಾರೆ. ಕುಕ್ಕಾವು ಘಟಕದ ಸದಸ್ಯರಾದ ರಶ್ಮಿ.ದಾಮೋದರ. ಗೀತಾ. ಶಕುಂತಲಾ. ರವೀಂದ್ರ. ಲಕ್ಷಣ ಗೌಡ. ಹರೀಶ್ ದೇವಾಡಿಗ ಮನೆ ರಿಪೇರಿಯಲ್ಲಿ ತೊಡಗಿಕೊಂಡರು.