ಬ್ರಮ್ಮಾವರ ತಾಲ್ಲೂಕಿನ ಯಡ್ತಾಡಿ ಬಳಿಯ ಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆ ಗಾಳಿಗೆ ಮರವೊಂದು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ತೊಡಕು ಉಂಟಾದ ಘಟನೆ ನಡೆದಿದೆ.

ರಸ್ತೆಯಲ್ಲಿ ಮರ ಬಿದ್ದಂತೆಯೇ ಸ್ಥಳೀಯರು ಸಹಕಾರ ನೀಡುವಂತೆ ಶ್ರೀ ಧರ್ಮಸ್ಥಳ ಶೌರ್ಯ ತಂಡದ ಯಡ್ತಾಡಿ ಘಟಕದ ಸದಸ್ಯರಲ್ಲಿ ಕೇಳಿರುತ್ತಾರೆ.

ಕೂಡಲೇ ಸ್ಪಂದಿಸಿದ ಶೌರ್ಯ ಘಟಕದ ಸದಸ್ಯರಾದ ಪುರುಷೋತ್ತಮ್, ರಮೇಶ್ ಮತ್ತು ರಾಮ ಇವರು ಸ್ಥಳಕ್ಕೆ ಧಾವಿಸಿ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುತ್ತಾರೆ.