ಕಲ್ಲಡ್ಕ: ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಂಕೋಡಿ ನಿವಾಸಿ ವೆಂಕಪ್ಪ ಜಿ. ಅವರ ಮನೆಗೆ ಭಾರೀ ಮಳೆಯ ಪರಿಣಾಮ ಮರ ಬಿದ್ದು ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ.

ಮರ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕದ ಸದಸ್ಯರು ಸ್ಥಳಕ್ಕೆ ಧಾವಿಸಿ, ಮರವನ್ನು ಸುರಕ್ಷಿತವಾಗಿ ತೆರವುಗೊಳಿಸಿದರು.
ಕಲ್ಲಡ್ಡಕ ಶೌರ್ಯ ಘಟಕದ ಸದಸ್ಯರಾದ ಗಣೇಶ್, ವಿದ್ಯಾ, ಸಂತೋಷ್, ರವಿಚಂದ್ರ, ಧನಂಜಯ, ವೆಂಕಪ್ಪ, ರಮೇಶ್, ಸತೀಶ್ ಮರ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ತುರ್ತು ಧಾವಿಸಿ ನೆರವು ನೀಡಿದ ಶೌರ್ಯ ತಂಡಕ್ಕೆ ಮನೆಯವರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.