ಮಳೆಯ ಪರಿಣಾಮದಿಂದಾಗಿ ಅಜೆಕಾರಿನ ಕೈಕಂಬದ ಬಳಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲು ಜನಜಾಗೃತಿಯ ಅಧ್ಯಕ್ಷರ ಕರೆಯ ಮೇರೆಗೆ ಅಜೆಕಾರು ಶೌರ್ಯ ಘಟಕದ ಸದಸ್ಯರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದ್ದು, ಸಂಚಾರಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯನ್ನು ಪರಿಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ, ಸಂಯೋಜಕಿಯಾದ ವಿಜಯ ಕಾಮತ್, ಜನಜಾಗೃತಿಯ ಅಧ್ಯರಾದ ನಂದಕುಮಾರ್ ಹೆಗ್ಡೆ ಹಾಗೂ ಘಟಕದ ಸದಸ್ಯರಾದ ವಿಜಯ ಕಾಮತ್, ಪ್ರವೀಣ್, ಸಂಜೀವ, ಅಶೋಕ್, ರಮೇಶ್ ಹಾಗೂ ರಾಜೇಶ್ ಭಾಗವಹಿಸಿದ್ದರು.
