ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ತಾಲ್ಲೂಕಿನ ವಗ್ಗ ಗ್ರಾಮದ ರುಕ್ಮಿಣಿ ಎನ್ನುವ ಬಡ ಕುಟುಂಬದ ಸದಸ್ಯರ ಮನೆಯನ್ನು ರಿಪೇರಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರು.
ದಿನಾಂಕ 03/5/26ರಂದು ಸುರಿದ ಭಾರೀ ಮಳೆಗೆ ಮನೆ ಹಾನಿಯಾಗಿತ್ತು. ವಿಷಯ ತಿಳಿದ ವಗ್ಗ ಕಾಡಬೆಟ್ಟು ಘಟಕದ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ಮನೆ ರಿಪೇರಿ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಮೇಲ್ಚಾವಣಿ ರಿಪೇರಿ ಕೆಲಸ ಇರುವುದರಿಂದ ಮಳೆಯ ನಡುವೆ ಕೆಲಸ ಕಷ್ಠವಾಗಿತ್ತು. ಮಳೆ ಬಿಡುವಿನ ಅವಧಿ ನೋಡಿಕೊಂಡು ಶ್ರಮದಾನ ನಡೆಸಿರುತ್ತಾರೆ.

ಗ್ರಾಮದ ಪ್ರಮುಖರಾದ ಶ್ರತಾಂಜನ್ ಜೈನ್ ಉಪಸ್ಥಿತರಿದ್ದು ಮನೆ ರಿಪೇರಿಗೆ ಅಗತ್ಯ ಸಲಕರಣೆಗಳನ್ನು ಕೊಟ್ಟು ಸಹಕರಿಸಿದರು. ಧನು ಪೂಜೆ ಶೌರ್ಯ ಘಟಕದ ಸದಸ್ಯರಾದ ಪ್ರಮೋದ್ ಆಚಾರ್ ಶ್ರಮಧಾನದಲ್ಲಿ ಭಾಗವಹಿಸಿ ಮೇಲ್ಚಾವಣಿ ರಿಪೇರಿಗೆ ಸಹಕರಿಸಿದರು.

ವಗ್ಗ ಕಾಡಬೆಟ್ಟು ಘಟಕದ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ, ರೋಹಿತ್, ಅಶೋಕ ಬೊಲ್ಮಾರ್, ಶಶಿಕಲ, ಶ್ರಮದಾನದಲ್ಲಿ ಭಾಗವಹಿಸಿದರು.