ಸುಳ್ಯ ತಾಲ್ಲೂಕಿನ ಮಠತಡ್ಕದಿಂದ ಪೆರುವಾಜೆಗೆ ಹಾದು ಹೋಗುವ ರಸ್ತೆಯಲ್ಲಿ ಗುಡ್ಡ ಜರಿದು ಮಣ್ಣು ಬಿದ್ದು ವಾಹನಗಳು ಹೋಗಲು ಕಷ್ಟವಾಗುತ್ತಿತ್ತು,

ವಿಷಯ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆಯ ಸದಸ್ಯರು ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸ್ವಯಂಸೇವಕರಾದ ಪ್ರಿಯಾ ಕೆ, ರಮೇಶ್ ಎಂ, ಶೇಷಪ್ಪ ನಾಯ್ಕ, ಸುಂದರ ನಾಯ್ಕ ಉಪಸ್ಥಿತರಿದ್ದರು.