ಮಡಿಕೇರಿ ತಾಲ್ಲೂಕಿನ ಮೊಣ್ಣಂಗೇರಿಯಲ್ಲಿ ಅತಿಯಾದ ಮಳೆ ಗಾಳಿಯಿಂದ ಮನೆಯ ಮೇಲ್ಛಾವಣಿಗೆ ಹಾನಿಯಾದ ಘಟನೆ ನಡೆದಿದೆ.

ಮನೆಯ ಹಿಂಬಾಗದಲ್ಲಿ ಹಂಚುಗಳು ಹಾನಿಯಾಗಿದ್ದು ಸರಿಪಡಿಸುವ ಗತ್ಯವಿತ್ತು.
ಬಡ ಕುಟುಂಬವಾಗಿರುವ ದೇವಕಿಯವರು ಶೌರ್ಯ ತಂಡದ ಸಹಕಾರ ಕೇಳಿದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಶ್ರಮದಾನ ನಡೆಸಿರುತ್ತಾರೆ.

ಘಟಕದ ಸದಸ್ಯರಾದ ಸಬೀನಾ, ಜಯಂತಿ, ಜನಾರ್ಧನ, ಪೂವಯ್ಯ, ಮಾಧವ, ಸಂತೋಷ್, ಲೋಕೇಶ್, ಗಣೇಶ್ ಶ್ರಮದಾನದಲ್ಲಿ ಭಾಗವಹಿಸಿದರು.