
ಬೈಂದೂರು ತಾಲ್ಲೂಕಿನ ಗಂಗೊಳ್ಳಿ ಸಮುದ್ರ ಕಿನಾರೆಯಲ್ಲಿ ಅಪರೂಪದ ತಳಿಯ ಕಡಲಾಮೆ ಪತ್ತೆಯಾಗಿದೆ. ಸಮುದ್ರದ ಅಲೆಯ ರಭಸಕ್ಕೆ ದಡ ಸೇರಿದ ಈ ಆಮೆ ಸತ್ತು ಹೋಗಿದ್ದು ಅದನ್ನು ಗಮನಿಸಿದ ಜನರು ಅಚ್ಚರಿಯಿಂದ ವೀಕ್ಷಿಸುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸಮುದ್ರ ತೀರಕ್ಕೆ ಧಾವಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಗಂಗೊಳ್ಳಿಯ ಸ್ವಯಂಸೇವಕರು ಕಡಲಾಮೆಯನ್ನು ಗಮನಿಸಿ ಸಮುದ್ರದ ಅಲೆಗಳಿಗೆ ಸಿಲುಕುತ್ತಿದ್ದ ಮೃತ ಆಮೆಯನ್ನು ನೀರಿನಿಂದ ಮೇಲೆ ತಂದು ನಾಯಿಗಳು ಮುಟ್ಟದಂತೆ ಸುರಕ್ಷಿತವಾಗಿ ರಕ್ಷಣೆ ಮಾಡಿರುತ್ತಾರೆ.
ಸಾಯಂಕಾಲ ಸುಮಾರು 5.30 ಕ್ಕೆ ಮೃತ ಆಮೆ ಗೋಚರಿಸಿದ್ದು 7 ಗಂಟೆಯ ವರೆಗೆ ಕಾದು ನಿಂತ ಸ್ವಯಂಸೇವಕರು ಮೃತ ಆಮೆಯನ್ನು ಮೆರಿನ್ ನೆಟ್ವರ್ಕ್ ರೀಪ್ ಸಂಸ್ಥೆಯವರಿಗೆ ಹಸ್ತಾಂತರ ಮಾಡಿದ್ದಾರೆ.

ಗಂಗೊಳ್ಳಿ ಘಟಕದ ಶೌರ್ಯ ಸ್ವಯಂಸೇವಕರಾದ ಮಣಿಕಂಠ, ನಾಗರಾಜ್ ಹಾಗೂ ಪ್ರಶಾಂತ ಖಾರ್ವಿ ಇವರು ಇದ್ದರು.