
ಮೇ 12,2021: ಕೊಲ್ಲಮೊಗ್ರದ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ಸೇವಾ ಘಟಕದಿಂದ ಕೊರೇನಾ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೊರೋನಾ ಸೋಂಕಿನಿAದ ಕ್ವಾರೆಂಟೈನ್ ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡಿದರು.

ಜೊತೆಗೆ ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನುಮಾಡಿದರು.ಕ್ವಾರೆಂಟೈನ್ ನಲ್ಲಿರುವ ಮನೆಗಳಿಗೆ ದಿನಬಳಕೆಯ ವಸ್ತುಗಳನ್ನು ತಲುಪಿಸಲು ನೆರವು ನೀಡುವುದಾಗಿ ಭರವಸೆ ನೀಡಿದರು.ಲಾಕ್ ಡೌನ್ ನಿಯಮ ಪಾಲಿಸುವಂತೆ, ಎಲ್ಲಂದರಲ್ಲಿ ತಿರುಗಾಡದಂತೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಸತೀಶ್.ಟಿ.ಎನ್, ಮಣಿಕಂಠ ಕಟ್ಟ ಹಾಗೂ ಸದಸ್ಯರಾದ ಕುಶಾಲಪ್ಪ ಜಾಲುಮನೆ, ಹರ್ಷ ಅಡ್ನೂರು ಮಜಲು ಹಾಗೂ ಬಾಲಸುಬ್ರಹ್ಮಣ್ಯ ಇದ್ದರು. ವರದಿ:ಬಾಲಸುಬ್ರಹ್ಮಣ್ಯ ಸ್ವಯಂಸೇವಕರು