
ಹೆಬ್ರಿ, ಮಾರ್ಚ್, 01,2025: ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ತೆಂಕೊಲ ಅರಣ್ಯ ವಿಭಾಗದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನವನ್ನು ಚಾರ ಬೇಳಂಜೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಡೆಸಿದರು.
ಕಾಡಿನಲ್ಲಿ ರಸ್ತೆಯಂಚಿನಲ್ಲಿ ಅಪಾಯಕಾರಿ ಕಸ, ತ್ಯಾಜ್ಯ, ಸಾರಾಯಿ ಬಾಟಲಿಗಳು ಬಿದ್ದಿದ್ದು ಪರಿಸರಕ್ಕೆ ಮಾರಕವಾಗಿತ್ತು. ಇಂತಹ ತ್ಯಾಜ್ಯಗಳನ್ನು ಕಾಡಿನಲ್ಲಿ ಹಾಗೆಯೇ ಬಿಟ್ಟಲ್ಲಿ ಮಳೆಗಾಲದಲ್ಲಿ ಹರಿಯುವ ನೀರಿನೊಂದಿಗೆ ಹಳ್ಳವನ್ನು ಸೇರುತ್ತವೆ. ಪ್ರಾಣಿಗಳ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತವೆ ಎನ್ನುವುದನ್ನು ಮನಗಂಡ ಸ್ವಯಂಸೇವಕರು ಸ್ವಚ್ಚತಾ ಶ್ರಮದಾನ ನಡೆಸಲು ತೀರ್ಮಾನಿಸಿದರು.

ಸುಮಾರು ಮೂರು ಕಿಲೋ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಕಸ ಆರಿಸಿದ್ದು ಸುಮಾರು 01 ಟನ್ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿವೆ. ಕಸವನ್ನು ಕುಚ್ಚೂರು ಗ್ರಾಮ ಪಂಚಾಯತ್ ನ ವತಿಯಿಂದ ವಿಲೇವಾರಿ ಮಾಡಿರುತ್ತಾರೆ.
ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದ್ದ ಸೋಮೇಶ್ವರ ವನ್ಯ ಜೀವಿ ವಲಯ ಹೆಬ್ರಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ವಲಯ ಅರಣ್ಯ ಅಧಿಕಾರಿ ಚಿದಾನಂದಪ್ಪ.ಜಿ ಇವರು ಮಾತನಾಡಿ “ಮೊದಲನೇ ಹಂತದ ಸ್ವಚ್ಛತಾ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಕಸ ಹೆಕ್ಕುವುದರ ಜೊತೆಗೆ ಸೂಚನಾ ಫಲಕ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು” ಎಂದರು.

ಈ ಸಂದರ್ಭದಲ್ಲಿ ಸೋಮೇಶ್ವರ ವನ್ಯ ಜೀವಿ ವಲಯ ಹೆಬ್ರಿ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ಸಿಬ್ಬಂದಿಗಳು, ಉಪ ವಲಯ ಅರಣ್ಯ ಅಧಿಕಾರಿ ಶಿವಾನಂದ, ಗಸ್ತು ಅರಣ್ಯ ಪಾಲಕ ಸುಖೇತ್, ಅರಣ್ಯ ವೀಕ್ಷಕರುಗಳಾದ ದುರ್ಗಪ್ಪ, ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಚಂದ್ರ ನಾಯ್ಕ, ಲತಾ, ಸಂಗೀತಾ, ಗಂಗಾರತ್ನ, ಶಶಿಕಲಾ, ಶ್ರೀನಿವಾಸ ನಾಯ್ಕ, ಮಹೇಶ್ ನಾಯ್ಕ್, ಸಂತೋಷ ನಾಯ್ಕ, ಸಂತೋಷ ಪೂಜಾರಿ, ರಾಘವೇಂದ್ರ ಎಸ್, ಸುಬ್ರಹ್ಮಣ್ಯ, ಕೆ.ಕೃಷ್ಣ ನಾಯ್ಕ, ಮಹೇಶ ನಾಯ್ಕ ಮತ್ತು ನಯನ ಕುಮಾರ್, ರಾಮಚಂದ್ರ, ನಾಗೇಂದ್ರ, ಗಿರೀಶ, ಗಣೇಶ್ ಜೊತೆಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಲತಾ, ಘಟಕ ಪ್ರತಿನಿಧಿ ಚಂದ್ರನಾಯ್ಕ, ಸೇವಾ ಪ್ರತಿನಿಧಿ ಸಂಗೀತಾ, ಘಟಕ ಕುಚ್ಚೂರು ಇದರ ಮೇಲ್ವಿಚಾರಕ ವಿಜಯ ಪೂಜಾರಿ, ಸ್ವಚ್ಛತಾ ಸೇನಾನಿ ಚಂದ್ರ ಶೇಖರ, ಬೇಳಂಜೆ ಸ್ಥಳೀಯ ನಿವಾಸಿ ಸನತ್ ಕುಮಾರ್, ಆದಿತ್ಯ ಹಾಗೂ ವರ್ತಮಾನ ಚಾನೆಲ್ ವರದಿಗರರಾದ ನಯನ್ ಕುಮಾರ್ ಉಪಸ್ಥಿತರಿದ್ದರು.