ತೆರವುಗೊಳಿಸಿದ ಇಂದಬೆಟ್ಟು ಶೌರ್ಯ ಶ್ರೀ ಧರ್ಮಸ್ಥಳ ಸ್ವಯಂಸೇವಕರು

ಬೆಳ್ತಂಗಡಿ, ಮಾರ್ಚ, 04, 2025: ಬೆಳ್ತಂಗಡಿ ತಾಲ್ಲೂಕಿನ ಬೆದ್ರಬೆಟ್ಟು ಗ್ರಾಮದ ಸ್ವ ಸಹಾಯ ಸಂಘದ ಸದಸ್ಯೆ ಶ್ರೀಮತಿ ವನಜಾರವರ ಮನೆಯು ಹಳೆಯದಾಗಿದ್ದು ಮೇಲ್ಚಾವಣಿಯ ಪಕ್ಕಾಸು ಹಾಳಾಗಿದ್ದು ಯಾವುದೇ ಸಮಯದಲ್ಲಿ ಬೀಳುವ ಅಪಾಯ ಎದುರಾಗಿತ್ತು. ಹಳೆಯದಾದ ಮನೆಯಾಗಿದ್ದರಿಂದ ಗೋಡೆಗಳು ಸಹ ಹಾಳಾಗಿದ್ದು ಹಳೆಯ ಮನೆಯನ್ನು ತೆರವುಗೊಳಿಸಿ ಹೊಸ ಮನೆ ನಿರ್ಮಾಣಮಾಡುವ ಅಗತ್ಯತೆ ಇದೆ. ಮಳೆಗಾಲಕ್ಕೂ ಮುನ್ನ ಮನೆ ರಚನೆ ಕೆಲಸವನ್ನು ಮಾಡಬೇಕಿದ್ದು, ಸಹಾಯ ಮಾಡುವಂತೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ನೆರವನ್ನು ಕೋರಿದ್ದರು.

ಮನವಿಗೆ ಸ್ಪಂದಿಸಿದ ಇಂದಬೆಟ್ಟು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಒಂದು ದಿನದ ಶ್ರಮದಾನ ನಡೆಸಿ ಮನೆಯ ಮೇಲ್ಚಾವಣಿಯನ್ನು ತೆರವುಗೊಳಿಸಿದ್ದಾರೆ.
ಆರ್ಥಿಕವಾಗಿ ಕಷ್ಠದಲ್ಲಿರುವ ಕುಟುಂಬವಾಗಿದ್ದರಿಂದ ವಲಯ ಮೇಲ್ವಿಚಾರಕರಾದ ಶ್ರೀಮತಿ ಉಷಾ ರವರ ಮಾರ್ಗದರ್ಶನದಲ್ಲಿ ಸ್ವಯಂಸೇವಕರು ಶ್ರಮದಾನವನ್ನು ನಡೆಸಿರುತ್ತಾರೆ.

ಘಟಕದ ಘಟಕಪ್ರತಿನಿಧಿಗಳಾದ ಕೇಶವ ಗೌಡ, ಪವನ್ ಕುಮಾರ್, ಮತ್ತು ಸ್ವಯಂಸೇವಕರಾದ ವಿಶ್ವನಾಥ ಗೌಡ, ಶ್ರೀಮತಿ ಹರಿಣಾಕ್ಷಿ, ಶ್ರೀ ಸುಧೀಶ್ ಕುಮಾರ್, ಶ್ರೀಮತಿ ಬೇಬಿ, ಶ್ರೀ ಚಂದ್ರಶೇಖರ ಗೌಡ, ಶ್ರೀಮತಿ ಯಶೋಧಾ ಇವರು ಶ್ರಮದಾನದಲ್ಲಿ ಪಾಲ್ಗೊಂಡರು. ಸ್ವಯಂಸೇವಕರ ಸೇವೆಗೆ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿರುತ್ತಾರೆ.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ