
ಬಂಟ್ವಾಳ ತಾಲ್ಲೂಕಿನ ದಂಡೆಗೋಳಿ ಅಂಗನವಾಡಿಯ ಆವರಣದಲ್ಲಿ ಸ್ವಚ್ಚತೆ ಮತ್ತು ಗಿಡ ನಾಟಿ ಶ್ರಮದಾನವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ವಾಮದಪದವು ತಂಡದ ಸ್ವಯಂಸೇವಕರು ನಡೆಸಿದರು.
ಅಂಗನವಾಡಿ ಶಿಕ್ಷಕಿ ಶ್ರೀಮತಿ ವನಿತಾ ಇವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶೌರ್ಯ ತಂಡ ವಾಮದಪದವು ಘಟಕದ ಸ್ವಯಂಸೇವಕರು ಶ್ರಮದಾನ ನಡೆಸಿದರು.

ಅಂಗನವಾಡಿ ಮಕ್ಕಳು ಓಡಾಡುವ ಸ್ಥಳವಾಗಿದ್ದರಿಂದ ಅಸ್ವಚ್ಚತೆಯ ಕಾರಣಕ್ಕೆ ತೊಂದರೆ ಉಂಟಾಗುವ ಅಪಾಯ ಇರುವುದರಿಂದ ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಚತೆಯನ್ನು ನಡೆಸಿದರು.

ಇದೇ ಸಂದರ್ಭದಲ್ಲಿ ಮಾವು, ಹಲಸು, ನಿಂಬೆ, ಚಿಕ್ಕು, ಪಪ್ಪಾಯ, ತೆಂಗು ಮುಂತಾದ ಒಟ್ಟು 35 ಗಿಡಗಳನ್ನು ನಾಟಿ ಮಾಡಿದರು.

ವಾಮದಪದವು ಸಮಿತಿಯ ಮಾಸ್ಟರ್ ಪ್ರಕಾಶ್ ಪೂಜಾರಿ, ಘಟಕದ ಸ್ವಯಂಸೇವಕರಾದ ಗಿರೀಶ್ ನಾಯಕ್, ತಾರಾನಾಥ, ಯಶೋಧರ ರವರು ಶ್ರಮದಾನದಲ್ಲಿ ಉಪಸ್ಥಿತರಿದ್ದರು.