
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ಸಹಭಾಗಿತ್ವದಲ್ಲಿ ಹಣ್ಣು ಹಂಪಲು ಗಿಡಗಳ ನಾಟಿ ಕಾರ್ಯಕ್ರಮ ತೀರ್ಥಹಳ್ಳಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣ ಬಸವಾನಿಯಲ್ಲಿ ನಡೆಯಿತು.

ಶಾಲಾ ಕಾಲೇಜಿಗೆ ಸಂಬಂದಧಿಸಿದ ಸುಮಾರು 8 ಎಕರೆ ಜಾಗದಲ್ಲಿ 450 ವಿವಿಧ ಜಾತಿಯ ಹಣ್ಣಿನ ಗಿಡಗಳಾದ ಮಾವು, ಪುನಃರ್ಪುಲಿ, ಪಂನ್ನೆರಲೇ, ನೆಲ್ಲಿ, ಮುರುಗ, ವಾಟೆ,ಗಿಡಗಳ ನ್ನು ನಾಟಿ ಮಾಡಲಾಯಿತು. ತೀರ್ಥಹಳ್ಳಿ ತಾಲೂಕಿನ ಶೌರ್ಯ ಘಟಕದ ಎಲ್ಲಾ ಸ್ವಯಂ ಸೇವಕರು ಶ್ರಮದಾನ ಮಾಡುವ ಮೂಲಕ ಗಿಡ ನಾಟಿ ಮಾಡಿದರು.

ಈ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಉದ್ಘಾಟಿಸಿದರು. ತೀರ್ಥಹಳ್ಳಿ ತಾಲೂಕಿನ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಶ್ರೀ ಸಂಜಯ್, ಬಿ ಎಸ್, “ವೃಕ್ಷಾ ಬಂಧನ ” ನೆರವೇರಿಸಿದರು.
ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರೀ ) ಶಿವಮೊಗ್ಗ, ಶ್ರೀಮತಿ ಚೇತನಾ ಶ್ರೀನಾಥ್ , ಬಸವಾನಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ದೀಪು, ಬಸವಾನಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀಮತಿ ರಮಾ ರಾಘವೇಂದ್ರ, ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ ಶ್ರೀ ಮುರಳೀಧರ ಶೆಟ್ಟಿ, ಪ್ರೌಢಶಾಲೆ, ಅಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀ ಜಗದೀಶ್, ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀ ಅರುಣಾಚಲ ಭಟ್, ಸದಸ್ಯರಾದ ಶ್ರೀ ಮಹೇಂದ್ರ,ಪ್ರಗತಿಬಂದು, ಸ್ವ ಸಹಾಯ ಸಂಘದ ಬಸವಾನಿ, ಒಕ್ಕೂಟದ ಹಾಲಿ, ಅಧ್ಯಕ್ಷರು ಶಾಂತಕುಮಾರ್, ಭಾರತೀಶ್, ಕೊಳವಾರ ಒಕ್ಕೂಟದ ಅಧ್ಯಕ್ಷರು ಶ್ರೀ ಕಂಠ ಒಕ್ಕೂಟದ ಉಪಾಧ್ಯಕ್ಷರು ಗಳು, ಶಾಲಾ ಮುಕ್ಯೋಪಾಧ್ಯಾಯರಾದ ಜಯಲಕ್ಷ್ಮಿ, ಯು, ಕೆ, ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್, ಕೆ, ಸಿ, ತೀರ್ಥಹಳ್ಳಿ ತಾಲೂಕಿನ ಶೌರ್ಯ ಮಾಸ್ಟರ್ ಆದ ಶ್ರೀ ಸುರೇಶ್ ಶೆಟ್ಟಿ, ಕ್ಯಾಪ್ಟನ್ ಆದ ಶ್ರೀ ಗಣೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಆದ ಶ್ರೀ ರವಿಕುಮಾರ್ ಕೆ, ವಿ, ತೀರ್ಥಹಳ್ಳಿ ಕ್ಷೇತ್ರ ಯೋಜನಾಧಿಕಾರಿಗಳು ಶ್ರೀಮತಿ ಮಮತಾ ಶೆಟ್ಟಿ, ಏನ್ ಉಪಸ್ಥಿತರಿದ್ದರು.

ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು ಶ್ರೀ ನಾಗರಾಜ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರು ಪ್ರಕಾಶ್, ಕೆ, ಸಿ ಸ್ವಾಗತಿಸಿದರು, ಯೋಜನಾಧಿಕಾರಿಗಳು ಮಮತಾ ಶೆಟ್ಟಿ ವಂದಿಸಿದರು.