ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೆಲಮಂಗಲ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನರಸೀಪುರದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಸಾಮಾಜಿಕ ಸೇವೆಗಳಲ್ಲಿ ಸದಾ ಸಕ್ರೀಯವಾಗಿ ಕೊಡಗಿಕೊಂಡಿರುವ ಶ್ರೀ ಧರ್ಮಸ್ಥಳ ಶೌರ್ಯ ತಂಡ ನರಸೀಪುರದ ಸದಸ್ಯರು ವೀರಸಾಗರ ಬೈಲಾಂಜನೇಯ ಸ್ವಾಮಿ ದೇವಾಲಯದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಮಾಡಲು ನಿರ್ಧರಿಸಿ ಒಂದು ದಿನದ ಶ್ರಮದಾನ ನಡೆಸಿದರು.
ದೇವಸ್ಥಾನದ ಆವರಣ ಸೇರಿದಂತೆ ದೇವಾಲಯದ ಪರಿಸರದಲ್ಲಿ ಅನಗತ್ಯವಾಗಿ ಬೆಳೆದ ಹುಲ್ಲು, ಗಿಡಗಳನ್ನು ತೆರವುಗೊಳಿಸಿ, ಕಸ ಕಡ್ಡಿಗಳನ್ನು ಆರಿಸಿ ಸ್ವಚ್ಚಗೊಳಿಸಿದರು.

ಘಟಕದ ಸದಸ್ಯರಾದ ರಘುನಂದನ್, ಕಾಳನಾಗಯ್ಯ, ಗಂಗಯ್ಯ, ಮಂಜುನಾಥ, ಶಿವಗಂಗಮ್ಮ, ಪುಷ್ಪಲತಾ, ಬಸಂತಮ್ಮ ಪಾಲ್ಗೊಂಡರು.