ದೊಡ್ಡಬಳ್ಳಾಪುರ: ಮನೆಯ ಮೇಲ್ಚಾವಣಿ ಹೊದಿಕೆ ಶ್ರಮದಾನ, ಅಣಗಲಾಪುರ ಶೌರ್ಯ ತಂಡದಿಂದ ಸೇವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಣಗಲಾಪುರದ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ವಾತ್ಸಲ್ಯ ಮನೆಯ ಮೇಲ್ಚಾವಣಿ ಹೊದಿಕೆ ಕೆಲಸ ಮಾಡಿದರು.

ತಾಲ್ಲೂಕಿನ ಮೆಣಸಿ ಕಾಲೋನಿಯ ಬಡ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮನೆ ಮಂಜೂರಾಗಿದ್ದು ಮನೆ ನೀರ್ಮಾಣ ಮಾಡಲಾಗುತ್ತಿದೆ.

 ಈ ಮನೆಯ ನಿರ್ಮಾಣದ ಸಮಯದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿಯವರ ಮಾರ್ಗದರ್ಶನದಲ್ಲಿ ಶೌರ್ಯ ತಂಡದ ಸ್ವಯಂಸೇವಕರು ಒಂದು ದಿನದ ಶ್ರಮದಾನ ನಡೆಸಿ ಮನೆಯ ಮೇಲ್ಚಾವಣಿ ಹೊದಿಕೆಯ ಕೆಲಸ ಮಾಡಿದರು.

ಘಟಕದ ಸದಸ್ಯರಾದ ಹನುಮಂತ, ರಾಯಪ್ಪ, ಜಗದೀಶ್, ಶಶಿಕುಮಾರ್, ಸುಮಿತ್ರ, ಮಂಜುಳ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಘಟಕದ ಮಾಸಿಕ ಸಭೆಯಲ್ಲಿ ಭಾಗವಹಿಸಿದರು.

Share Article
Previous ಸುಳ್ಯ: ಕುಂಟುಮಾಯ ಅರಣ್ಯ ಪ್ರದೇಶದಲ್ಲಿ ಹಣ್ಣು ಹಂಪಲು ಗಿಡ ನಾಟಿ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved