ಶಾಲಾ ಕೈತೋಟ ರಚನೆ, ಹಣ್ಣಿನ ಗಿಡ ನಾಟಿ, ಕಾಪಿನಡ್ಕ ಶಾಲೆಯಲ್ಲಿ ಶೌರ್ಯ ತಂಡದಿಂದ ಶ್ರಮದಾನ

ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಕಾಪಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಹಣ್ಣಿನ ಗಿಡ ನಾಟಿ ಹಾಗೂ ಶಾಲಾ ಕೈತೋಟ ರಚನೆ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನಡೆಸಿದರು.

ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ವಿಶ್ವನಾಥ್, ಸ್ವಯಂಸೇವಕರಾದ  ಮುರಳಿ, ಅಜಿತ್, ಸುರೇಶ್, ಸಂತೋಷ, ನಾಗೇಶ್, ದಯಾನಂದ, ಸತೀಶ್, ಸವಿತಾ, ಶಾಂತಿ, ಲೀಲಾವತಿ, ವೇದಾವತಿ, ಲತಾ, ಭಾರತಿ ಶ್ರಮದಾನದಲ್ಲಿ ಪಾಲ್ಗೊಂಡರು.

ಬಳೆಂಜ ವಲಯದ ಮೇಲ್ವಿಚಾರಕಿ ಪದ್ಮಾವತಿ, ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

ಗಿಡ ನಾಟಿಗೆ ಅಗತ್ಯವಿರುವ  ಹಣ್ಣಿನ ಗಿಡಗಳನ್ನು ಹಾಗೂ ಕೈತೋಟಕ್ಕೆ ಅಗತ್ಯವಿರುವ  ತರಕಾರಿ ಬೀಜವನ್ನು  ವಿಪತ್ತು ನಿರ್ವಹಣಾ ಸಮಿತಿ ಗುರುವಾಯನಕೆರೆಯ ಕ್ಯಾಪ್ಟನ್ ವಿಶ್ವನಾಥ ರವರು ನೀಡಿದರು.

ಸ್ವಯಂಸೇವಕರ ಸೇವೆಗೆ ಶಾಲಾ ಶಿಕ್ಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

Share Article
Previous ಗುರುವಾಯನಕೆರೆ ಶಾಲಾ ಪರಿಸರದಲ್ಲಿ ಗಿಡ ನಾಟಿ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved