ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಟ್ಲ ತಾಲ್ಲೂಕಿನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು.

ವಿಟ್ಲ ತಾಲ್ಲೂಕಿನ ಪೆರ್ನೆ ಗ್ರಾಮದ ಹನುಮಾಜೆ ಹಿಂದೂ ರುದ್ರಭೂಮಿಯಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಅರಣ್ಯ ಸಸಿಗಳು ಹಾಗೂ ಹಣ್ಣು ಹಂಪಲು ಗಿಡಗಳನ್ನು ನಾಟಿ ಮಾಡಿದರು.
ಸ್ವಯಂಸೇವಕರಾದ ಸುರೇಶ, ರಮೇಶ, ಗೋಪಾಲ, ಕೇಶವ,ಸುರೇಶ ಅಶೋಕ, ಜನಾರ್ದನ, ಜಗದೀಶ, ಗಿರೀಶ, ವೆಂಕಪ್ಪ, ಶ್ರೀಧರ, ಜಯಶ್ರೀ, ಅಶ್ಮಿತಾ, ಮಮತಾ, ಚಂದ್ರಾವತಿ, ಸುನಂದಾ ಭಾಗವಹಿಸಿದರು.
