ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ಶಾಲಾ ಗ್ರಂಥಾಲಯದ ಸ್ವಚ್ಚತೆ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಮಂಡೇಕೋಲು ಸದಸ್ಯರು ನಡೆಸಿದರು.

ಗ್ರಂಥಾಲಯದ ಕೋಣೆಯನ್ನು ಸ್ವಚ್ಚಗೊಳಿಸಿ, ನೆಲಹಾಸನ್ನು ಅಳವಡಿಸಿ ಪೀಟೋಪಕರಣಗಳನ್ನು ಜೋಡಿಸಿ ಪುಸ್ತಕಗಳನ್ನು ಹೊಂದಿಸಿ ಇಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು,SDMC ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಮಂಡೇಕೋಲು ಶೌರ್ಯ ಘಟಕದ ಸದಸ್ಯರಾದ ಅನಿಲ್ ಕುಮಾರ್, ಸುರೇಶ್ ಕೆ. ಎನ್, ಲತಾ ಕುಮಾರಿ, ನಾಗರತ್ನ, ಪ್ರಿಯ, ಶೋಭಕುಮಾರಿ, ನಾರಾಯಣಿ ಇವರು ಶ್ರಮದಾನದಲ್ಲಿ ಪಾಲ್ಗೊಂಡರು.