ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರ ೀಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದಿಂದ ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ಶಾಲೆಗೆ ಸಂಬಂಧಿಸಿದ ತೆಂಗಿನ ತೋಟ ಹಾಗೂ ಶಾಲೆಯ ಪರಿಸರದಲ್ಲಿ ಗಿಡಗಂಟಿಗಳನ್ನು, ಪೊದೆಗಳನ್ನು ಕಡಿದು ತೆಗೆದು ಸ್ವಚ್ಛಗೊಳಿಸಲಾಯಿತು. ಶ್

ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪಿಲಾತಬೆಟ್ಟು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಶಾಲಾ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯಸ್ಥರು ಜೊಯೆಲ್ ಲೋಬೊ, ಸೇವಾ ಪ್ರತಿನಿಧಿ ಶ್ರೀಮತಿ ಅಮೃತಾ, ಘಟಕ ಪ್ರತಿನಿಧಿ ಆಶಾಲತ, ಘಟಕದ ಅಧ್ಯಕ್ಷರಾದ ಮೋಹನ್ ಸಾಲ್ಯಾನ್ ಸದಸ್ಯರುಗಳಾದ ಶಶಿಧರ್, ಸುಂದರ, ರಮೇಶ, ಕುಶಾನಂದ, ಶಿವಯ್ಯ, ಶೀಲಾವತಿ, ಜಯಲಕ್ಷ್ಮಿ, ಭೂಮಿಕ, ಶೋಭ ಶ್ರಮದಾನದಲ್ಲಿ ಭಾಗವಹಿಸಿದ್ದರು.
