ಸರಕಾರಿ ಶಾಲೆಯ ಆವರಣದಲ್ಲಿ ಸ್ವಚ್ಚತೆ, ಕೈತೋಟ ರಚನೆ.

ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನಡೆಸಿದರು.

ಬೆಳ್ತಂಗಡಿ ತಾಲ್ಲೂಕಿನ ಆರಂಬೋಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈದಾನದಲ್ಲಿ ಮತ್ತು ಶಾಲೆಯ ಸುತ್ತಮುತ್ತಲೂ ಬೆಳೆದಿದ್ದ ಹುಲ್ಲು, ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿದರು.  ನೀರು ಹರಿದು ಹೋಗುವ ಚರಂಡಿ ಸ್ವಚ್ಚತೆ ಮಾಡಿ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಮಕ್ಕಳ ಸಂಚಾರಕ್ಕೆ ತೊಂದರೆ ಉಂಟುಮಾಡುವ ಕಾರಣದಿಂದ ಹುಲ್ಲು, ಅನಗತ್ಯ ಗಿಡಗಳ ತೆರವು ಮಾಡಿ ಮೈದಾನ, ಸಂಚಾರದ ದಾರಿಯನ್ನು ಸ್ವಚ್ಚಗೊಳಿಸಲಾಯಿತು.

ಶಾಲಾ ಶಿಕ್ಷಕರು ಸ್ವಚ್ಚತೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಚತೆ, ಶಾಲೆಯ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ ಕೆಲಸವನ್ನು ಮಾಡಿರುತ್ತಾರೆ.  

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕೈತೋಟ ರಚನೆ ಮಾಡಲು ಅಗತ್ಯವಿರುವ ಸಿದ್ದತೆಗಳನ್ನು ನಡೆಸಿದರು. ಬಿತ್ತನೆಗೆ ಅಗತ್ಯ ಬೀಜಗಳನ್ನು ಶಿಕ್ಷಕರಿಗೆ ನೀಡಿದರು.

ಆರಂಬೋಡಿ ಶೌರ್ಯ  ಘಟಕದ ಸದಸ್ಯರಾದ ಹರೀಶ ಆಚಾರ್ಯ, ದಿನೇಶ್, ಸದಾನಂದ, ವಿನೋದರ, ಸತೀಶ ಕಲ್ಲಬೆಟ್ಟು, ಶೇಖರ ಪೂಜಾರಿ, ಡಿಕಾಯ್ಯ, ಸಂಜೀವ, ರಮಾನಂದ, ಸತೀಶ ಪಿ, ರಾಘವ, ಶಿವರಾಮ, ಸುರೇಖ, ಲಕ್ಷ್ಮೀ, ಗೀತಾ ಪಾಲ್ಗೊಂಡರು.

ಶಾಲಾ ಮುಖ್ಯೋಪಧ್ಯಾಯರಾದ ಸಾಲಿಯಾನ್ ಮೋನಿಷಾ ರವರು ಶ್ರಮದಾನ ಮಾಡಿ ಸಹಕಾರ ನೀಡಿದ ಸ್ವಯಂಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Share Article
Previous 7 ಬಡ ಕುಟುಂಬಗಳ ಮನೆ ರಿಪೇರಿ; ಮಳೆಯಲ್ಲಿ ಕಾಡಿದ ಸಮಸ್ಯೆಗೆ ಕಾಡಬೆಟ್ಟು ಶೌರ್ಯ ಘಟಕದ ಸ್ಪಂದನೆ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved