ಹೆಬ್ರಿ: ನಾಲ್ಕು ಕಿ.ಮಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ

ಹೆಬ್ರಿ ತಾಲ್ಲೂಕಿನ ಮರ್ಣೆ ಗ್ರಾಮ ಪಂಚಾಯತ್ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಜೆಕಾರು ಘಟಕದ ಸ್ವಯಂಸೇವಕರು ಭಾಗವಹಿಸಿ ಸ್ವಚ್ಚತೆ ನಡೆಸಿದರು.

ಅಜೆಕಾರು ಪೇಟೆಯಿಂದ ಎಣ್ಣೆಹೊಳೆವರೆಗೆ 4 ಕಿಲೋಮೀಟರ್ ಉದ್ದದ ಹೆದ್ದಾರಿಯ ಬದಿಗಳಲ್ಲಿ ಕಸವನ್ನು ತೆರವುಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ನೈರ್ಮಲ್ಯದ ಅರಿವು ಮೂಡಿಸಲಾಯಿತು.

ಘಟಕದ ಸ್ವಯಂಸೇವಕರಾದ ವಿಜಯ ಕಾಮತ್, ಪ್ರವೀಣ್, ಕೃಷ್ಣ, ಅಶೋಕ, ಮಲ್ಲಿಕಾ, ರೇಷ್ಮಾ, ಸುಮಿತ್ರ ಹಾಗೂ ಸುಲೋಚನಾ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಶಾಲೆಯ ಕುಡಿಯುವ ನೀರಿನ ಬಾವಿ ಸ್ವಚ್ಚತೆ; ಅಜೆಕಾರು ಶೌರ್ಯ ತಂಡದಿಂದ ಶ್ರಮದಾನ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved