
ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಅಳದಂಗಡಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಸರ್ಕಾರಿ ಪ್ರೌಢ ಶಾಲೆಯಲ್ಲಿ ತೆಂಗಿನ ಗಿಡ ನಾಟಿ ಶ್ರಮದಾನ ಮಾಡಿದರು.

ಶಾಲಾ ಶಿಕ್ಷಕರ ಮನವಿಯಂತೆ ಶ್ರಮದಾನ ನಡೆಸಿದ ಸ್ವಯಂಸೇವಕರು ಶಾಲೆಯ ಪರಿಸರದಲ್ಲಿ ಸ್ವಚ್ಚತೆ ಶ್ರಮದಾನವನ್ನು ನಡೆಸಿದರು. ತೆಂಗಿನ ಗಿಡಗಳನ್ನು ಶಾಲೆಯಿಂದ ನೀಡಿದ್ದು ಸ್ವಯಂಸೇವಕರು ಗುಂಡಿಗಳನ್ನು ತೆಗೆದು ನಾಟಿ ಮಾಡುವ ಕೆಲಸ ಮಾಡಿದ್ದಾರೆ.

ಗಿಡ ನಾಟಿ ಮಾಡುವ ಗುಂಡಿಗೆ ಅಗತ್ಯ ಸೊಪ್ಪು ಸಂಗ್ರಹಿಸಿ ಒಟ್ಟು 25 ತೆಂಗಿನ ಗಿಡ ನಾಟಿ ಮಾಡಿದ್ದಾರೆ.
ಸ್ವಯಂಸೇವಕರಾದ ಅಮಿತಾ, ನಳಿನಿ, ರವಿಚಂದ್ರ, ಪ್ರಕಾಶ, ಹರೀಶ, ನಾರಾಯಣ, ಅಶೋಕ, ಹರಿಣಾಕ್ಷಿ ಶ್ರಮದಾನದಲ್ಲಿ ಭಾಗವಹಿಸಿದ್ದರು.