ಕುಮಟಾ ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಓರ್ವ ಬೈಕ್ ಸವಾರ ಗುಂಡಿಯ ಕಾರಣದಿಂದ ಬಿದ್ದಿರುವುದನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನ ನಡೆಸಿ ಗುಂಡಿ ಮುಂಚ್ಚಿರುತ್ತಾರೆ.

ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ವೆಂಕಟೇಶ್ ಬೀರ ಗೌಡ, ಪ್ರಭಾಕರ ಕುಪ್ಪು ಗೌಡ, ಹರಿಶ್ ಜೋಗಿ ಗೌಡ ಇವರು ಸ್ಥಳೀಯರೊಂದಿಗೆ ರಸ್ತೆ ರಿಪೇರಿ ಕೆಲಸ ಮಾಡಿದರು.