
ವಿಟ್ಲ ತಾಲ್ಲೂಕಿನ ಇರಾ ಗ್ರಾಮದ ಸಂಜೀವ ಬೆಲ್ಚಾಡ ಇವರಿಗೆ ದೃಷ್ಠಿ ದೋಷದ ಸಮಸ್ಯೆಯಿಂದಾಗಿ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆಯಿದೆ. ಕಣ್ಣು ಕಾಣದೇ ಇರುವುದರಿಂದ ಕೆಲಸಕ್ಕೆ ಹೋಗುವುದಾಗಲೀ, ಮನೆಯಿಂದ ಹೊರಗೆ ಹೋಗಲಾಗಲೀ ಸಾಧ್ಯವಾಗುತ್ತಿಲ್ಲ. ಪತ್ನಿ ಮನೆಯಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದು ಬರುವ ಆದಾಯದಿಂದ ಜೀವನ ನಡೆಸುವುದು ಕಷ್ಟವಾಗಿದೆ.
ಇವರ ಪರಿಸ್ಥಿತಿಯನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇವರ ಕುಟುಂಬಕ್ಕೆ ಪ್ರತೀ ತಿಂಗಳು ಮಾಶಾಸನ ನೀಡುತ್ತಾ ಬಂದಿದೆ.
ಇವರ ಮನೆಯ ಸುತ್ತಮುತ್ತಲೂ ಅತಿಯಾದ ಹುಲ್ಲು ಬೆಳೆದು ನಿಂತು ಅವುಗಳನ್ನು ತೆರವು ಮಾಡಲು ಸಾಧ್ಯವಾಗದೇ ಹಾಗೆಯೇ ಬಿಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡಕ್ಕೆ ಸ್ವಚ್ಚತೆ ಮಾಡಿಕೊಟ್ಟು ಸಹಕಾರ ನೀಡುವಂತೆ ವಿನಂತಿ ಮಾಡಿಕೊಂಡಿದ್ದರು.

ಸ್ಥಳೀಯರ ಮನವಿಗೆ ಸ್ಪಂದಿಸಿದ ಶೌರ್ಯ ತಂಡದ ಸ್ವಯಂಸೇವಕರು ಶ್ರಮದಾನವನ್ನು ನಡೆಸಿ ಮನೆಯ ಪರಿಸರದಲ್ಲಿ ಸ್ವಚ್ಚತೆಯನ್ನು ಮಾಡಿರುತ್ತಾರೆ.
ಸ್ವಯಂಸೇವಕರ ಸೇವೆಗೆ ಕುಟುಂಬದವರು ಕೃತಜ್ಞತೆ ಸಲ್ಲಿಸಿರುತ್ತಾರೆ. ಘಟಕದ ಸದಸ್ಯರಾದ ರವೀಂದ್ರ, ಮಾಲತೇಶ್, ಮೋಹನ್, ಉಮೇಶ್, ಪುರುಷೋತ್ತಮ್, ಗಣೇಶ್, ಸತೀಶ್, ರಾಜೇಶ್, ಮಮತ, ರತ್ನ, ಸುಮಿತ, ಶಕೀಲಾ ಶ್ರಮದಾನದಲ್ಲಿ ಭಾಗವಹಿಸಿದ್ದರು.