ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಿಲಾತಬೆಟ್ಟು ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಬಡ ಕುಟುಂಬದ ಮನೆಯ ರಿಪೇರಿಯ ಶ್ರಮದಾನ ನಡೆಸಿದರು.

ತಾಲ್ಲೂಕಿನ ಪಿಲಾತಬೆಟ್ಟು ಸಮೀಪದ ನೇರಳಕಟ್ಟೆ ಮನೆಯಲ್ಲಿ ತೀರಾ ಬಡತನ ದಲ್ಲಿ ಇರುವ ಒಬ್ಬಂಟಿ ಮಹಿಳೆ ಶ್ರೀಮತಿ ಚಿನ್ನು ಅವರ ಮನೆಯ ಮೇಲ್ಚಾವಣಿ ಮಳೆಯಿಂದ ಸೋರುವ ಸ್ಥಿತಿಯಲ್ಲಿತ್ತು. ಸರಿಪಡಿಸಲು ಸಹಕಾರ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಶೌರ್ಯ ತಂಡದ ಸದಸ್ಯರು ಮನೆಯ ಮೇಲ್ಚಾವಣಿ ರಿಪೇರಿ ಮಾಡಿ ಟರ್ಪಲ್ ಅಳವಡಿಕೆ ಮಾಡಿಕೊಟ್ಟರು.

ಘಟಕ ಪ್ರತಿನಿಧಿ ಶಶಿಧರ, ಸಂಯೋಜಕಿ ಆಶಾಲತಾ, ರಮೇಶ, ಜಯಲಕ್ಷ್ಮಿ ಶೀಲಾವತಿ, ಸುಂದರ ಶ್ರಮದಾನದಲ್ಲಿ ಭಾಗವಹಿಸಿದರು.