ಹೊನ್ನಾವರ: ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ; ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಇಡಗುಂಜಿ ಶೌರ್ಯ ತಂಡದಿಂದ ಸೇವೆ.

ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲಾ ಪರಿಸರದಲ್ಲಿ ಸ್ವಚ್ಚಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ ಹೊನ್ನಾವರ ತಾಲ್ಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಇಡಗುಂಜಿಯ ಸ್ವಯಂಸೇವಕರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಲ್ಲಿ ಕಳೆದ 6 ವರ್ಷಗಳಿಂದ ಸ್ವಯಂಸೇವಕರು ಸಾಮಾಜಿಕ ಹಾಗೂ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ಸಾಮಾಜಿಕ ಸೇವಾ ಚಟುವಟಿಕೆಗಳ ಭಾಗವಾಗಿ ಶಾಲೆಯ ಸ್ವಚ್ಚತಾ ಶ್ರಮದಾನ ನಡೆಸಿರುತ್ತಾರೆ.

 ದಿನಾಂಕ 27/5/2026 ರಂದು ನಡೆದ ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕ ಇಡಗುಂಜಿಯ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಪಾಲಕರು, ಪೋಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಲಾ ಪರಿಸರದಲ್ಲಿನ ಸ್ಥಳ ಮತ್ತು ತರಗತಿ ಕೋಣೆಯನ್ನು ಸ್ವಚ್ಛಗೊಳಸಲಾಗಿದ್ದು ಮಕ್ಕಳನ್ನು ಸ್ವಾಗತಿಸಲು  ಶಾಲೆಯನ್ನು ಸಿದ್ದಗೊಳಿಸಲಾಯಿತು.

ಶೌರ್ಯ ಸ್ವಯಂಸೇವಕರ ಈ ಸೇವೆ ಶ್ಲಾಘನೆಗೆ ಪಾತ್ರವಾಗಿದೆ. ಇಡಗುಂಜಿ ಘಟಕದ ಸ್ವಯಂಸೇವಕರ ಸೇವೆಯನ್ನು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

Share Article
Previous ವಿಟ್ಲ: ಕುಡಿಯುವ ನೀರಿನ ಬಾವಿ ಸ್ವಚ್ಚತೆ, ಮಾನವೀಯತೆ ಮೆರೆದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved