ಬ್ರಹ್ಮಾವರ ತಾಲ್ಲೂಕಿನ ಮಂದಾರ್ಥಿಯಲ್ಲಿ ಅತಿಯಾದ ಗಾಳಿ ಮಳೆಗೆ ಮನೆಯ ಮೇಲೆ ಬ್ರಹತ್ ಮರ ಬಿದ್ದು ಮನೆ ಹಾನಿಯಾದ ಘಟನೆ ನಡೆದಿದೆ.

ನೈಲಾಡಿ ಕಬ್ಬಿಣ ಹಿತ್ಲು ವಿನ ಗೀತಾ ಶೇಡ್ತಿ ಅವರ ಮನೆ ಮೇಲೆ ಮರ ಬಿದ್ದು ಮನೆಯ ಮಾಡು ಸಂಪೂರ್ಣ ನುಜ್ಜುಗುಜ್ಜಗಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶೌರ್ಯ ತಂಡದ ಸದಸ್ಯರು ಮನೆ ರಿಪೇರಿಗೆ ಸಹಕಾರ ನೀಡಿರುತ್ತಾರೆ.

ಮಂದಾರ್ತಿ ಘಟಕದ ಸದಸ್ಯರಾದ ಮಂಜುನಾಥ್ ಕುಲಾಲ್,ಕರುಣಾಕರ, , ಗಣೇಶ್ ಆಚಾರ್ಯ,ಸಂತೋಷ್ ಕುಲಾಲ್,ವಿಶ್ವನಾಥ್ ನಾಯ್ಕ್ ಉಪಸ್ಥಿತರಿದ್ದರು.