ಬ್ರಹ್ಮಾವರ ತಾಲ್ಲೂಕಿನ ಯಡ್ತಾಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಯಾದ ಗಾಳಿ ಮಳೆಗೆ ತೆಂಗಿನ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹಲವು ವಿದ್ಯುತ್ ಕಂಬಗಳು ಬುಡ ಸಮೇತವಾಗಿ ಧರೆಗೆ ಉರುಳಿರುವ ಘಟನೆ ನಡೆದಿದೆ.

ಧರೆಗುರುತಿಳಿದ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವು ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ವಿದ್ಯುತ್ ಪ್ರಸರಣ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಿದರು.

ಯಡ್ತಾಡಿ ಘಟಕದ ಸ್ವಯಂಸೇವಕರಾದ ಪುರುಶೋತ್ತಮ, ಸುಬ್ರಹ್ಮಣ್ಯ ರಮೇಶ, ರಾಮ, ಸವಿತಾ ಇದ್ದರು.