ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ,ಜಾನುವಾರುಕಟ್ಟೆ ಬಳಿ ಸ್ವಚ್ಚತಾ ಶ್ರಮದಾನ ನಡೆಯಿತು.

ಗ್ರಾಮಪಂಚಾಯತಿ ಸಹಭಾಗಿತ್ವದಲ್ಲಿ ನಡೆದ ಶ್ರಮದಾನದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ಘಟಕ ಮಂದಾರ್ಥಿಯ ಸದಸ್ಯರು ಭಾಗವಹಿಸಿ ಸ್ವಚ್ಚತೆಗೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
ಶೌರ್ಯ ಘಟಕದ ಸದಸ್ಯರಾದ ಚಂದ್ರ ನಾಯ್ಕ್ ಶಿರೂರು, ಅಜಿತ್ ಕುಲಾಲ್ , ಜಯರಾಮ್,ಮಂಜುನಾಥ್ ಕುಲಾಲ್ , ಭಾಸ್ಕರ ಆಚಾರ್ಯ ಇದ್ದರು.