ಬ್ರಹ್ಮಾವರ ತಾಲ್ಲೂಕಿನ ಬಾರಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಳಿ ಮಳೆಗೆ ಶಾಲೆಯ ಮಾಡಿನ ಹಂಚು ಬಿದ್ದು ಒಡೆದು ಹೋಗಿದ್ದು, ಮೇಲ್ಚಾವಣಿಗೆ ಹಾಕಿದ ತಗಡು ಶೀಟ್ ಕೂಡ ಗಾಳಿಗೆ ಕೆಳಗೆ ಬಿದ್ದು ಹೋಗಿತ್ತು.

ಸರಿಪಡಿಸಲು ಸಹಕಾರ ನೀಡುವಂತೆ ಶಾಲಾ ಶಿಕ್ಷಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡಕ್ಕೆ ಕರೆ ಮಾಡಿದ್ದು ಕೂಡಲೇ ಸ್ಪಂದನೆ ನೀಡಿದ ಮಂದಾರ್ಥಿ ಘಟಕದ ಸ್ವಯಂಸೇವಕರು ಶಾಲೆಯ ಒಡೆದ ಹಂಚುಗಳನ್ನು ಸರಿಪಡಿಸಿ ಸೀಟುಗಳನ್ನು ಮರು ಹೊದಿಸಿ ಮಳೆಯ ನೀರು ಸೋರದಂತೆ ಮಾಡಿದ್ದಾರೆ.

ಮಂದಾರ್ಥಿ ಘಟಕದ ಸ್ವಯಂಸೇವಕರಾದ ಚಂದ್ರ ಶಿರೂರು, ಕರುಣಾಕರ, ಭಾಸ್ಕರ ಆಚಾರ್ಯ, ಗಣೇಶ್ ಆಚಾರ್ಯ, ಸುರೇಶ ನಾಯ್ಕ್ ಇದ್ದರು.